ಗುರುವಾರ ಸಗರ ಸೋಫಿ ಸರಮತ್ ದರ್ಗಾ ಜಾತ್ರೆ
ಡಿ.13 ರಂದು ಸಗರ ಸೋಫಿ ಸರಮತ್ ದರ್ಗಾ ಜಾತ್ರೆ
ಯಾದಗಿರಿ, ಶಹಾಪುರಃ ತಾಲೂಕಿನ ಸಗರ ಗ್ರಾಮದ ಪ್ರಸಿದ್ಧ ಅಸದುಲ್ ಅವಲಿಯಾ ಎ ದಕ್ಕನ್ ಕರ್ಬಲಾಯೇಸಾನಿ ಹಜರತ್ ಸಯ್ಯದ್ ಶಾ ಮಹ್ಮದ್ ಮೈಮೂದ್ ಸೋಫಿ ಸರಮತ್ ರಹಮತುಲ್ಲಾ ಅಲೈ ಮಹಾತ್ಮರ ಜಾತ್ರೆ ಗುರುವಾರ ಡಿ.13 ರಂದು ಸಂಭ್ರಮದಿಂದ ಜರುಗಲಿದೆ ಎಂದು ದರ್ಗಾದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದರ್ಗಾದ ಪೀಠಾಧಿಪತಿ ಸಯ್ಯದ್ ಶಾ ಅಸದುಲ್ಲಾ ಸರಮತ್ ಅವರು ಡಿ.12 ಗ್ರಾಮದ ಕೇಂದ್ರ ಭಾಗವಾದ ಚಾವಡಿ ಎದುರಿನಲ್ಲಿರುವ ಮುನ್ನವಾರ ಭಾಷ ದರ್ಗಾಗದಿಂದ ರಾತ್ರಿ 1-00 ಗಂಟೆ ಸುಮಾರಿಗೆ ಬಾಜಾ-ಭಜಂತ್ರಿಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಿಂದ ಹಜರತ್ ಸಯ್ಯದ್ ಸೋಫಿ ಸರಮತ್ ಅವರ ಗಂಧ ಹೊರಡುತ್ತದೆ.
ಡಿ. 13ರಂದು ಸಂಭ್ರಮದಿಂದ ಜಾತ್ರೆ ನಡೆಯಲಿದೆ. 14 ರಂದು ದರ್ಗಾ ತುಂಬೆಲ್ಲ ದೀಪಗಳನ್ನು ಮೂಡಿಸಲಾಗುತ್ತದೆ. ಭಕ್ತಾಧಿಗಳು ಅದನ್ನು ನೋಡಿ ಶ್ರೀಸಂತರ ದರ್ಶನ ಪಡದು ಪುನೀತಗೊಳ್ಳಲಿದ್ದಾರೆ.
ಅಂದು ಸುತ್ತಲಿನ ಗ್ರಾಮದಿಂದ ಸಾವಿರಾರು ಜನ ಭಕ್ತರು ಆಗಮಿಸಿ ದರ್ಶನ ಪಡೆದು, ಕಾಯಿ ನೈವೇದ್ಯ ಹೂ.ದೀಫಧೂಪ ಅರ್ಪಿಸುತ್ತಾರೆ.
ಅಲ್ಲದೆ ಜಾತ್ರೆಯಲ್ಲಿ ಮಾಡಿದ ಸವಿ ಸವಿ ವಿವಿಧ ಖಾದ್ಯ ಸಿಹಿ ಪದಾರ್ಥಗಳನ್ನು ಸವಿದು ಖಷಿ ಪಡುತ್ತಾರೆ. ಹಿಂದೂ ಮುಸ್ಲಿಂ ಭಾವೈಕ್ಯದ ತಾಣ ಇದಾಗಿದ್ದು ಯಾವುದೇ ಬೇಧ ಭಾವವಿಲ್ಲದೆ ಸರ್ವ ಧರ್ಮದ ಜನರು ಜಾತ್ರೆಯಲ್ಲಿ ಭಾಗವಹಿಸುವದು ವಿಷೇಶವಾಗಿದೆ.