ಬಸವಭಕ್ತಿ
ಡಿ.21 ರಂದು ಕನಕದಾಸರ ಜಯಂತ್ಯುತ್ಸವ ನಿರ್ಧಾರ
ಡಿ.21 ಕನಕದಾಸರ ಜಯಂತ್ಯುತ್ಸವ ನಿರ್ಧಾರ
ಶಹಾಪುರಃ ನಾಡಿನಲ್ಲಿ ಗಣ್ಯರ ಆಕಸ್ಮಿಕ ಸಾವಿನಿಂದ ಸರ್ಕಾರ ಕಳೆದ ತಿಂಗಳಲ್ಲಿ ನಡೆಯಬೇಕಿದ್ದ ಕನಕದಾಸ ಜಯಂತ್ಯುತ್ಸವ ಆಚರಣೆ ಮುಂದೂಡಲಾಗಿತ್ತು. ಮತ್ತು ಕನಕದಾಸರ ಜಯಂತಿ ಆಚರಣೆಗೆ ಆಯಾ ಜಿಲ್ಲಾಧಿಕಾರಿಗಳ ಮುಂದೆ ದಿನಾಂಕ ಪ್ರಕಟಿಸುವ ಮೂಲಕ ಆಚರಿಸಲಿದ್ದಾರೆ ಎಂದು ಸರ್ಕಾರ ಸೂಚಿಸಿತ್ತು.
ಆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಕನಕದಾಸ ಜಯಂತಿ ಆಚರಣೆಗೆ ಇಲ್ಲಿನ ತಹಶೀಲ್ದಾರ ಸಂಗಮೇಶ ಜಿಡಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇದೇ ಡಿ.21 ಆಚರಿಸಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಉಪ ತಹಶೀಲ್ದಾರ ಪ್ರಕಾಶ ಪುರಾಣಿಕ, ಸಿಬ್ಬಂದಿ ಶ್ರೀಕಾಂತ ತಿಳಿಸಿದ್ದಾರೆ.
ಅಂದು ನಗರದ ಚರಬಸವೇಶ್ವರ ಕಮಾನ ಮೂಲಕ ನಗರಸಭೆ ಆವರಣದವರೆಗೆ ಮೆರವಣಿಗೆ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
—————-