ಬಸವಭಕ್ತಿ

ಮಠ, ಮಂದಿರ ಮನದ ದಣಿವಾರಿಸುವ ಶಕ್ತಿ ಕೇಂದ್ರಗಳು-ಸೂಗೂರೇಶ್ವರ ಶ್ರೀ

ನೆಮ್ಮದಿ ಕಲ್ಪಿಸುವ ಶಕ್ತಿ ಮಂದಿರಗಳಿಗಿದೆ-ಸೂಗೂರೇಶ್ವರ ಶ್ರೀ

ಯಾದಗಿರಿ, ಶಹಾಪುರಃ ಮನುಷ್ಯನ ಸಂಸಾರದ ಜಂಜಾಟದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ನೂರಾರು ಸಮಸ್ಯೆಗಳಿಗೆ ಪರಿಹಾರ ದೊರೆಯದಿದ್ದಾಗ ಮನುಷ್ಯ ದೇವಸ್ಥಾನ, ಮಠ ಮಾನ್ಯಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾನೆ. ಅದರಿಂದ ಆತನ ಮನಸ್ಸಿಗೆ ನೆಮ್ಮದಿ ದೊರೆಯಲಿದೆ ಇದು ಸಾಂಪ್ರದಾಯಿಕವಾಗಿ ಬಂದ ಪದ್ಧತಿಯಾಗಿದೆ ಎಂದು ಕುಂಬಾರಗೇರಿ ಹಿರೇಮಠದ ಸೂಗೂರೇಶ್ವರ ಶ್ರೀಗಳು ಹೇಳಿದರು.

ಪಟ್ಟಣದ ಲಕ್ಷ್ಮೀ ನಗರದ ಆಂಜನೇಯ ಮತ್ತು ಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿತ್ಯ ಬಳಕೆ ವಸ್ತುಗಳನ್ನು ತಯಾರಿಸುವ ಮನುಷ್ಯನನ್ನು ನಾವು ನೆನೆಪಿಸುತ್ತೇವೆ. ಮನೆಗೆ ತಂದ ಟಿವಿ ಬಗ್ಗೆ ಚನ್ನಾಗಿದೆ ಎಂದು ಆ ಕಂಪನಿಯವರನ್ನು ಹೊಗಳುತ್ತೇವೆ. ಸುಂದರವಾಗಿ ರೂಪಿಸಿದ್ದಾರೆ. ಅಥವಾ ಒಂದು ಮೈಬೈಲ್ ಖರೀದಿಸಿಕೊಂಡು ಮೈಬಲ್ ಸಿಸ್ಟಮ್ ಚನ್ನಾಗಿದೆ. ಸಾಕಷ್ಟು ಸದುಪಯೋಗ ಆಪ್ಷನ್ ನೀಡಿದ್ದಾರೆ ಎಂದು ಹೊಗಳುತೇವೆ.

ಆದರೆ ಅವೆಲ್ಲವನ್ನು ರೂಪಿಸಿದ ಮನುಷ್ಯನನ್ನೆ ಆ ದೇವರು ರೂಪಿಸಿದ್ದಾನೆ ಎಂಬುದನ್ನ ಮರೆಯುತ್ತೇವೆ. ಪ್ರಕೃತಿಯಲ್ಲಿ ಸಾಕಷ್ಟು ಆಹಾರ ಪದಾರ್ಥ ಗಾಳಿ, ನೀರು ಸೃಷ್ಟಿಸಿ ನಮಗೆಲ್ಲ ಒದಗಿಸಿರುವ ದೇವರನ್ನು ನಾವು ಸ್ಮರಣೆ ಮಾಡುತ್ತಿಲ್ಲ.
ಇಂತಹ ಸಂಧಿಗ್ಧ ಸ್ಥಿತಿಯಲ್ಲಿ ದೇವರ ನಾಮ ಸ್ಮರಣೆ ಅತ್ಯಗತ್ಯ ಎಂಬುದನ್ನು ಈ ದೇವಸ್ಥಾನ ಜೀರ್ಣೋದ್ಧಾರ ಸಮಾರಂಭ ಜನರಿಗೆ ಉತ್ತಮ ಸಂದೇಶ ನೀಡಿದೆ.

ನವಗ್ರಹ ಪ್ರತಿಷ್ಠಾಪನೆ, ರಾತ್ರಿ ಶಿವ ಧ್ಯಾನ ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಿರುವುದು ಭಕ್ತಾಧಿಗಳಲ್ಲಿ ಸಂತೃಪ್ತಿ ಭಾವನೆ ಮೂಡಲಿದೆ.

ಕನಿಷ್ಠ ಪಕ್ಷ ನಿತ್ಯ ಒಂದು ತಾಸು ಆದರೂ ಆ ಸೃಷ್ಟಿಕರ್ತನ ಅಥವಾ ನೀವು ನಂಬಿರುವ ದೇವರ ಸ್ಮರಣೆ ಮಾಡಿದಲ್ಲಿ. ನಿಜವಾಗಲೂ ಆ ದೇವರು ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂದರು.

ಸದಾ ಒಳಿತನ್ನೆ ಯೋಚಿಸುವದು ಸಕರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡಲ್ಲಿ ಮತ್ತು ಪಾವನ ಜನ್ಮ ಕಲ್ಪಿಸಿದ ದೇವರನ್ನು ಸ್ಮರಣೆ ಮಾಡಿದ್ದಲ್ಲಿ ಜೀವನ ಸಂಪನ್ನವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಆಲೂರಿನ ವೃಷಭೇಂದ್ರ ಶಿವಾಚಾರ್ಯರು, ಮದ್ರಿಕಿ ಹಿರೇಮಠದ ಶೀಲವಂತ ಶಿವಾಚಾರ್ಯರು, ಕನ್ಯಾಕೋಳೂರ ಹಿರೇಮಠದ ಚನ್ನವೀರ ಶಿವಾಚಾರ್ಯರು ಸಾನ್ನಿದ್ಯವಹಿಸಿದ್ದರು.

ಬಡಾವಣೆಯ ಹಿರಿಯರಾದ ಸಾಹಿತಿ ಚಂದ್ರಕಾಂತ ಕರದಳ್ಳಿ, ಕೆಂಚಪ್ಪ ನಗನೂರ, ಈರಣ್ಣ ಕಾಮಾ, ಶಂಭುಲಿಂಗಪ್ಪ ಎತ್ತಿನಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಬಸವರಾಜ ಹಿರೇಮಠ, ನಾಗಪ್ಪ ತಹಶೀಲ್ದಾರ, ಸಣ್ಣ ನಿಂಗಪ್ಪ ನಾಯ್ಕೋಡಿ, ರೇವಣಸಿದ್ದಪ್ಪ ಕಲಬುರ್ಗಿ ಇದ್ದರು.

ಶ್ರೀನಿವಾಸ ಆಚಾರ್ಯ ನಿರೂಪಿಸಿದರು. ಶಿವಪ್ರಸಾದ ಕರದಳ್ಳಿ ಸ್ವಾಗತಿಸಿದರು. ಚಂದ್ರಶೇಖರ ಜೀನ್ಕೇರಿ ವಂದಿಸಿದರು. ಬಡಾವಣೆಯ ನಾಗರಿಕರು, ಮಹಿಳೆಯರು ಮಕ್ಕಳು ಭಾಗವಹಿಸಿ ಶ್ರೀದೇವರ ದರ್ಶನ ಭಾಗ್ಯಪಡೆದು ಕೃತಾರ್ಥರಾದರು. ಸರ್ವರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button