ಶಾಸಕ ರಾಜೂಗೌಡರಿಂದ ದೇವರಗಡ್ಡಿ ಶಕ್ತಿ ಮಾತೆಗೆ ಪೂಜೆ
ಯಾದಗಿರಿ,ನಾರಾಯಣಪುರ: ಸುರಪುರ ಮತಕ್ಷೇತ್ರದ ಶಾಸಕ ನರಸಿಂಹ ನಾಯಕ (ರಾಜುಗೌಡ) ತಮ್ಮ 41 ನೇ ವರ್ಷದ ಹುಟ್ಟು ಹಬ್ಬವನ್ನು ಕುಟುಂಬ ಸಮೇತರಾಗಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.
ಗುರುವಾರ ಬೆಳಗ್ಗೆ ಸಮೀಪದ ದೇವರಗಡ್ಡಿ ಕ್ಷೇತ್ರದಲ್ಲಿ ನೆಲೆಸಿರುವ ಶಕ್ತಿ ಮಾತೆ ಶ್ರೀ ಗದ್ದೆಮ್ಮ ದೇವಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ತೆರಳಿದ ಶಾಸಕ ರಾಜುಗೌಡರೊಂದಿಗೆ ಅವರ ತಾಯಿಯವರಾದ ತಿಮ್ಮಮ್ಮ ಶಂಬನಗೌಡ್ರು, ಪತ್ನಿ, ಪುತ್ರ ಮಣಿಕಂಠ ನಾಯಕ, ಶಕ್ತಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನಾಶೀರ್ವಾದ ಪಡೆದರು.
ಈ ವೇಳೆ ಮಾತನಾಡಿದ ಶಾಸಕ ರಾಜುಗೌಡ ತಾಲೂಕಿನಲ್ಲಿ ಮಳೆ ಕೊರೆತೆಯಿಂದ ರೈತ ಸಮೂಹ ಸಂಕಷ್ಟದಲ್ಲಿದೆ ಇಂತಹ ಸಂದರ್ಭದಲ್ಲಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದೇನೆ ಎಂದು ತಿಳಿಸಿದರು.
ಬಳಿಕ ಮಾರ್ಗ ಮಧ್ಯ ಬರುವ ಹನುಮ ನಗರದ ಆಂಜನೇಯಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಶಾಸಕರು ನಂತರ ಇಲ್ಲಿನ ಬಜಾರ ಗಣೇಶ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಸ್ಥಳೀಯ ಮುಖಂಡರು, ಅಭಿಮಾನಿಗಳೊಟ್ಟಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ರಾಜುಗೌಡ ಅಭಿಮಾನಿಗಳು, ಕಾರ್ಯಕರ್ತರು ಸೇರಿದಂತೆ ಅವರ ಅಪಾರ ಬೆಂಬಲಿಗರು ಶಾಸಕರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದರು.