ವಿನಯ ವಿಶೇಷ

ನಾಟಕಗಳು ಮನುಷ್ಯನ ಸಂಸ್ಕೃತಿಯ ಜೀವಾಳ-ಪೂಜಾರಿ

ಬೂದನೂರ ಗ್ರಾಮದಲ್ಲಿ ನಾಟಕ ಪ್ರದರ್ಶನ

ಯಾದಗಿರಿ, ಶಹಾಪುರಃ ಹಳ್ಳಿಗಳಲ್ಲಿ ಡಪ್ಪಿನ ಆಟ, ದೊಡ್ಡಾಟಗಳು ಮನುಷ್ಯನ ಸಂಸ್ಕøತಿಗೆ ಮೆರಗು ನೀಡುತ್ತವೆ. ಸಮಾಜದ ಶಾಂತಿಗೆ ಇವುಗಳು ಪೂರಕಗಳಾಗಿವೆ ಎಂದು ಗ್ರಾಮದ ಮುಖಂಡ ಲಕ್ಷ್ಮಣ ಪೂಜಾರಿ ಕರೆ ನೀಡಿದರು.

ತಾಲೂಕಿನ ಶಾರದಳ್ಳಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ನಾಟ್ಯ ಕಲಾವಿದರ ಸಂಘದ ರಂಗ ಸಜ್ಜಿಕೆಯಲ್ಲಿ ನಡೆದ ಸಾಮಾಜಿಕ ನಾಟಕ ಛಲ ತೊಟ್ಟ ಹೆಣ್ಣು ಅರ್ಥಾರ್ಥ ಮರಳಿ ತಂದ ಸಂಪತ್ತು ಎನ್ನುವ ಗ್ರಾಮಿಣ ಸೊಗಡಿನ ನಾಟಕವನ್ನು ಉದ್ಗಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ರೈತಾಪಿ ಜನರು ಕೃಷಿ ಕಾರ್ಯಚಟುವಟಿಕೆ ಮುಗಿದ ಬಳಿಕ ಗ್ರಾಮದಲ್ಲಿ ಎಲ್ಲರೂ ಒಗ್ಗಟ್ಟಾಗಿ ತಾವೇ ಖುದ್ದಾಗಿ ಅಭಿನಯಿಸುವ ಮೂಲಕ ತಮ್ಮ ಪರತಿಭೆಯನ್ನು ಸಹ ಹೊರಗೆಡುವ ಜೊತೆಗೆ ಸಂತಸ ಪಡುತ್ತಿದ್ದರು. ಮನೋರಂಜನೆಗಾಗಿ ಗ್ರಾಮೀಣ ಭಾಗದಲ್ಲಿ ಜನರು ಇಂದಿಗೂ ನಾಟಕಗಳನ್ನು ಆಯೋಝಿಸುವದಲ್ಲದೆ ತಾವೇ ಅಭಿನಯಿಸುವ ಮೂಲಕ ಸಂತೃಪ್ತಿಯನ್ನು ಪಡೆಯುತ್ತಾರೆ.

ಇಂತಹ ಹವ್ಯಾಸಿ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕಿದೆ. ಸರ್ಕಾರ ಆ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಕಲಾವಿದರನ್ನು ರಕ್ಷಿಸಬೇಕಿದೆ. ಇವರಿಂದ ಸಾಮಾಜಿಕ ಸಂಸ್ಕøತಿ, ಜಾನಪದ ಇತಿಹಾಸ ಉಳಿಯಲು ಸಾಧ್ಯವಿದೆ ಎಂದರು.

ಮುಖಂಡರಾದ ಮಲ್ಲಪ್ಪ ಪೂಜಾರಿ ಜ್ಯೋತಿ ಬೆಳಗಿದರು. ನಾಟಕ ಪ್ರದರ್ಶನದ ಸಮಾರಂಭದ ಅಧ್ಯಕ್ಷತೆಯನ್ನು ಭೀಮಣ್ಣಗೌಡ ಹೊಸಮನಿವಹಿಸಿದ್ದರು. ಗ್ರಾಮ ಮುಖಂಡರಾದ ಸುಬ್ಬಣ್ಣ ಕಕ್ಕಸಗೇರ್, ಶರಣಪ್ಪ, ಪರಮಣ್ಣ ಪೂಜಾರಿ, ಮಲ್ಲಣ್ಣ ರಾಮನಾಳ ಸೇರಿದಂತೆ ನಾಟಕದ ಮಾಲೀಕರಾದ ನಾಗೇಶ ಶಾರದಹಳ್ಳಿ ಉಪಸ್ಥಿತರಿದ್ದರು.

ಕಲಾವಿದರಾದ ಜಯಮ್ಮ ಶಾರದಹಳ್ಳಿ, ದೇವಿಂದ್ರ ಬಡಿಗೇರ, ಖಾನಾಪೂರ ಎಸ್.ಕೆ, ಸಣ್ಣ ನಾಗೇಶ ಶಾರದಹಳ್ಳಿ, ನೀಲಕಂಠರಡ್ಡಿ ಶಾರದಹಳ್ಳಿ, ಮಲ್ಲೇಶಿ ಶಾರದಹಳ್ಳಿ, ಬಸವರಡ್ಡಿ, ದಿಲೀಪ್ ಶಾರದಹಳ್ಳಿ, ಅಶೋಕ ಗೋಕಾಕ, ವಿಜಯಲಕ್ಷ್ಮಿ ದಾವಣಗೇರೆ, ಅಂಬಿಕಾ ವಿಜಯಪೂರಇತರೆ ಕಲಾವಿದರು ಇದ್ದರು.

Related Articles

Leave a Reply

Your email address will not be published. Required fields are marked *

Back to top button