ದಿವಟಿಗೆ ಬೆಳಕಿನಲ್ಲಿ ಬಲಭೀಮೇಶ್ವರರ ದರ್ಶನ
ದಿವಟಿಗೆ ಬೆಳಕಿನಲ್ಲಿ ಬಲಭೀಮೇಶ್ವರರ ದರ್ಶನ – ಭಕ್ತರು ಪುನೀತ
ಶಹಾಪುರಃ ಸಂಕ್ರಾಂತಿ ಅಂಗವಾಗಿ ನಗರದಲ್ಲಿ ನಡೆಯುವ ಪಲ್ಲಕ್ಕಿ ಮೆರವಣಿಗೆಯಲ್ಲಿ ಈಗಾಗಲೇ ಬಲಭೀಮೇಶ್ವರರ ಉತ್ಸವ ಮೂರ್ತಿ ಹೊತ್ತ ಹೂಗಳಿಂದ ಅಲಂಕಾರಗೊಂಡ ಭೀ.ಗುಡಿ ಪಲ್ಲಕ್ಕಿ ಮೆರವಣಿಗೆ ನಗರದ ಮಾರುತಿ ಮಂದಿರ ಹತ್ತಿರ ಬಲು ಜೋರಾಗಿ ನಡೆದಿದೆ.
ದಿವಟಿಗೆ ಬೆಳಕಿನಲ್ಲಿ, ನಾನಾವಾದ್ಯಗಳನ ನಿನಾದ, ಭಕ್ತರ ಜಯಘೋಷ, ಬಾನಂಗಳಕ್ಕೆರುಗುವ ಸಿಡಿಮದ್ದಿನ ರಂಗುರಂಗಿನ ಚಿತ್ತಾರ ನಡುವೆ ಶ್ರೀದೇವರ ದರ್ಶನಕ್ಕಾಗಿ ಭಕ್ತರ ನೂಕಾಟ, ವಿದ್ಯುತ್ ದೀಪಗಳ ಸಾಲು, ಇಡಿ ಪಟ್ಟಣ ಸಿಂಗಾರಗೊಂಡು ಎತ್ತ ನೋಡಿದರು, ಕೇಸರಿ ಪರಾರಿ, ಧ್ವಜ ಕಟೌಟ್ ವಿದ್ಯುತ್ ದೀಪಗಳ ಅಲಂಕಾರ ನೋಡುಗರನ್ನು ಮಂತ್ರ ಮುಗ್ಧ ರನ್ನಾಗಿಸುತ್ತಿದೆ.
ಹಿರಿಯುರು, ಕಿರಿಯರು ಮಹಿಳೆಯರು ಮಕ್ಕಳು ಗುಂಪು ಗುಂಪಾಗಿ ಶ್ರೀದೇವರ ದರ್ಶನಪಡೆಯುತ್ತಿದ್ದಾರೆ.
ಅಲ್ಲದೆ ದಿಗ್ಗಿ ಸಂಗಮೇಶ್ವರರ ಪಲ್ಲಕ್ಕಿ ಹಳಿಸಗರದಲ್ಲಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಹಳಿಸಗರಕ್ಕೆ ಹೋಗಿ ದರ್ಶನ ಪಡೆದು ಬರುತ್ತಿದ್ದಾರೆ ಎನ್ನಬಹುದು.
ಸಂಗಮೇಶ್ವರ ಪಲ್ಲಕ್ಕಿಯೂ ಇಷ್ಟರಲ್ಲಿಯೇ ಪಟ್ಟಣಕ್ಕೆ ಆಗಮಿಸಲಿದೆ. ಭಕ್ತರು ದರ್ಶನಕ್ಕಾಗಿ ಕಾಯುತ್ತಿರುವದು ಕಂಡು ಬಂದಿತು.