ಎಣ್ಣೆ ಪಕ್ಷದ್ದು ಬಡಿದಾಟ ಶಾಸಕರದ್ದು
ಈಗಲ್ಟನ್ ರೆಸಾರ್ಟ್ ನಲ್ಲಿ ಶಾಸಕರ ಮಾರಾಮಾರಿ
ಬೆಂಗಳೂರಃ ರಾಜ್ಯದ ರಾಜಕೀಯ ಗೊಂದಲಯ ಮಯವಾಗಿದ್ದು, ರೆಸಾರ್ಟ್ ರಾಜಕೀಯ ಚಟುವಟಿಕೆ ಬಿರುಸಿನಿಂದ ಕೂಡಿದ್ದ ವೇಳೆ ಈಗಲ್ಡನ್ ರೆಸಾರ್ಟ್ ನಲ್ಲಿ ತಂಗಿದ್ದ ಕಾಂಗ್ರೆಸ್ ಪಕ್ಷದ ಶಾಸಕರಲ್ಲಿ ಆನಂದಸಿಂಗ್ ಮತ್ತು ಕಂಪ್ಲಿ ಶಾಸಕ ಗಣೇಶ ನಡುವೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ.
ಮಾರಾಮಾರಿಯಲ್ಲಿ ಶಾಸಕ ಗಣೇಶ ಬಾಟ್ಲಿಯಿಂದ ಆನಂದಸಿಂಗ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ಆನಂದಸಿಂಗ್ ರನ್ನು ನಗರದ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಿಜೆಪಿಗೆ ಬೆಂಬಲಿಸಲು ಸಿದ್ಧವಾಗಿದ್ದ ಗಣೇಶ ಹಾಗೂ ನಾಂಗ್ರೇಂದ್ರರನ್ನು ಆನಂದಸಿಂಗ್ ತಂತ್ರಗಾರಿಕೆಯಿಂದ ದೂರ ಉಳಿಯುವಂತಾಯಿತು ಎಂಬ ಕಾರಣಕ್ಕೆ ಇಬ್ಬರು ಶಾಸಕರ ನಡುವೆ ಮಾತಿನ ಚಕಮಕಿ ನಡೆದು ಬಡಿದಾಟ ಹಂತ ತಲುಪಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಆನಂದ ಸಿಂಗ್ ಭೇಟಿ ಮಾಡಿದ ಡಿ.ಕೆ.ಸುರೇಶ
ಈಗಲ್ಟನ್ ರೆಸಾರ್ಟ್ ನಲ್ಲಿ ಶಾಸಕರಿಬ್ಬರ ನಡುವೆ ನಡೆದ ಮಾಮಾರಿಯಲ್ಲಿ ಆಸ್ಪತ್ರೆಗೆ ದಾಖಲಾದ ಆನಂದಸಿಂಗ್ ರನ್ನು ಭೇಟಿ ಮಾಡಿದ ಸಂಸದ ಡಿ.ಕೆ.ಸುರೇಶ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಮೊದಲು ಆರೊಗ್ಯ ಸರಿಹೋಗಲಿ ಯಾವುದೇ ದುಡುಕಿನ ನಿರ್ಧಾರಬೇಡ ಮಾಧ್ಯಮದ ಮುಂದೆ ಗೊಂದಲದ ಹೇಳಿಕೆ ನೀಡದಿರಲು ನಿರ್ಧಾರಕೈಗೊಂಡ ಬಗ್ಗೆ ಮಾಹಿತಿ ದೊರೆತಿದೆ.