ಸುಭಾಷಚಂದ್ರ ಬೋಸ್ ಜನ್ಮ ದಿನಾಚರಣೆ
ಯಾದಗಿರಿ, ಶಹಾಪುರಃ ತಾಲ್ಲೂಕಿನ ಕಾಡಂಗೇರಾ (ಬಿ) ಗ್ರಾಮದ ಕೃಷ್ಣ ನರ್ಸರಿ ಮತ್ತು ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕ ಸೋಪಣ್ಣ ಕುಲಾಚಾರಿ, ನೇತಾಜಿ ದೇಶ ಕಂಡ ಮಹಾನ್ ಪುರುಷ. ಅವರ ಜೀವನದ ತತ್ವ ಆದರ್ಶಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡಾಗ ಉನ್ನತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯ.
ಸುಭಾಷಚಂದ್ರ ಬೋಸ್ ಅವರ ಧೀರತ್ವ ಅವರ ನೇರ ನಡೆ ದೇಶಕ್ಕಾಗಿ ಅವರು ಜೀವಮಾನವಿಡಿ ಶ್ರಮಿಸಿದರು. ತಮ್ಮ ಪ್ರಾಣವನ್ನು ಲೆಕ್ಕಿಸದೆ ತಾಯ್ನಾಡಿಗಾಗಿ ಪ್ರಾಣವನ್ನೆ ಅರ್ಪಿಸಿದ ಮಹಾತ್ಮರು.
ಅವರ ಇತಿಹಾಸ ಬಹು ರೋಚಕವಾಗಿದೆ. ಬೋಸ್ ರನ್ನು ಕಂಡರೆ ವೈರಿ ಪಡೆ ಎದೆ ನಡುಗುತಿತ್ತು ಅಂತಹ ಶಿಸ್ತಿನ ಸಿಪಾಯು ಭಾರತಾಂಬೆಯ ಮಗನಾಗಿದ್ದರು. ದೇಶ ಸೇವೆಯೇ ಈಶ ಸೇವೆ ಎಂದು ಬದುಕಿ ಮಹಾತ್ಮರು ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಸಿಂಧೂ ಕ್ಯಾತನಾಳ, ನಿಂಗಮ್ಮ ಕಾಡಂಗೇರಾ, ಷಣ್ಮುಖ ಪುರ್ಲೆ ಸೇರಿದಂತೆ ಶಾಲಾ ಮಕ್ಕಳು ಇದ್ದರು. ಮುಂಚಿತವಾಗಿ ಬೋಸ್ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.