12 ಕೋಟಿ ವೆಚ್ಚದ ಮಾದರಿ ಕಾಲೇಜು ಕಟ್ಟಡದ ಶಂಕುಸ್ಥಾಪನೆ
12 ಕೋಟಿ ವೆಚ್ಚದಲ್ಲಿ ಕಟ್ಟಡ ಕಾಮಗಾರಿ, 12 ಎಕರೆ ಭೂಮಿ ಹಸ್ತಾಂತರ
ಮಹತ್ವಕಾಂಕ್ಷೆ ಯೋಜನೆ ಅಡಿಯಲ್ಲಿ ಮಾದರಿ ಕಾಲೇಜು ನಿರ್ಮಾಣ
ಯಾದಗಿರಿ, ಶಹಾಪುರಃ ದೇಶದ ಹಿಂದುಳಿದ ಜಿಲ್ಲೆ (ಆಸ್ಪರೇಷನ್) ಅಭಿವೃದ್ಧಿ ಯೋಜನೆಯಡಿಯಲ್ಲಿ ನಗರಕ್ಕೆ ಸರ್ಕಾರಿ ಮಾದರಿ ಪದವಿ ಕಾಲೇಜು ಮಂಜೂರಾಗಿದ್ದು, 12 ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧ ಹಾಗೂ ಉನ್ನತ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಉಚ್ಛತರ್ ಶಿಕ್ಷಾ ಅಭಿಯಾನ ಯೋಜನೆ ಅಡಿಯಲ್ಲಿ ಕಾಲೇಜು ಕಟ್ಟಡ ಕಾಮಗಾರಿ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆ ಆಸ್ಪರೇಷನ್ ಯೋಜನೆ ಅಡಿಯಲ್ಲಿ ಈ ಯೋಝನೆ ಮಂಜೂರಾಗಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇದಿಂದ ಸಕಲ ವ್ಯವಸ್ಥೆಯನ್ನು ಒಳಗೊಂಡಿರುವ ಮಾದರಿ ಕಾಲೇಜು ಇದಾಗಲಿದೆ ಎಂದರು.
ಈಗಾಗಲೇ ಪ್ರಧಾನ ಮಂತ್ರಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಡಿಜಿಟಲ್ ಲಾಂಚ್ ಮಾಡಿದ್ದು, ಇದರ ಯೋಜನೆಯನ್ನು ಸದ್ಭಳಿಕೆ ಮಾಡಿಕೊಂಡು ವಿದ್ಯಾರ್ಥಿಗಳು ಉನ್ನತಿಯನ್ನು ಸಾಧಿಸಬೇಕು ಎಂದಿದ್ದಾರೆ.
ಗುಲ್ಬರ್ಗಾ ವಿಶ್ವ ವಿದ್ಯಾಲಯದ ಉಪ ಕುಲಪತಿಗಳಾದ ಪ್ರೋ.ಎಸ್.ಆರ್.ನಿರಂಜನ್ ಅವರು ಮಾತನಾಡಿ, ಗುಲಬರ್ಗಾ ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ 480 ಕಾಲೇಜು ಹಾಗೂ 65 ಬಿ.ಎಡ್.ಕಾಲೇಜುಗಳು ಬರುತ್ತವೆ.
ರಾಯಚೂರು ಪ್ರತ್ಯೇಖ ವಿಶ್ವ ವಿದ್ಯಾಲಯ ಮಾಡುವ ಯೋಜನೆ ಇದ್ದು, ಇನ್ನೂ ಗೆಜೆಟ್ ಆಗಿಲ್ಲ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ಅಗತ್ಯವಾಗಿದೆ. ವಿದ್ಯಾರ್ಥಿಗಳ ಮನಸ್ಥಿತಿ ಬದಲಾಗಬೇಕು. ತಾಂತ್ರಿಕತೆಯನ್ನು ಅಗತ್ಯವಾದಷ್ಟು ಮಾತ್ರ ಬಳಕೆ ಮಾಡಿಕೊಳ್ಳಬೇಕು. ದುರ್ಬಳಕೆ ಆಗುವ ಸಾಧ್ಯತೆ ಹೆಚ್ಚು ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳಲ್ಲಿ ಸಾಕಷ್ಟು ಪ್ರತಿಭೆ ಇದ್ದು, ಅದಕ್ಕೆ ಪೂರಕವಾದ ವಾತಾವರಣವನ್ನು ರೂಪಿಸಬೇಕಿದೆ. ಅವಕಾಶ ಹಾಗೂ ಆಯ್ಕೆಯನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಸದ್ಭಳಿಕೆ ಮಾಡಿಕೊಂಡು ಜೀವನದಲ್ಲಿ ಉನ್ನತಿಯನ್ನು ಸಾಧಿಸಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದೇಶದ ವಿಶ್ವ ವಿದ್ಯಾಲಯದ ಅಭ್ಯಾಸ ಮಾಡುವ ಸಾಮಥ್ರ್ಯವನ್ನು ಬೆಳೆಯಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿಯು ಮೀಸಲಾತಿಯನ್ನು ನೀಡುತ್ತದೆ ವಿನಹಃ ಶಿಕ್ಷಣವನ್ನು ಅಲ್ಲ. ನಾವು ಉತ್ತಮ ಶಿಕ್ಷಣ ಪಡೆದುಕೊಳ್ಳುವದು ಮುಖ್ಯ ಧ್ಯೇಯವಾಗಲಿ ಎಂದು ತಿಳಿಸಿದರು.
ಉಪ ವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ತಹಶೀಲ್ದಾರ ಸಂಗಮೇಶ ಜಿಡಗೆ, ಕಾಲೇಜು ಶೀಕ್ಷಣ ಇಲಾಖೆಯ ನಿರ್ದೇಶಕ ಪ್ರೋ.ಮಲ್ಲೇಶಪ್ಪ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶ್ ಕುಮಾರ, ಕಾಲೇಜಿನ ಪ್ರಾಚಾರ್ಯ ವಿ.ಎಂ.ಹಿರೇಮಠ, ಉಪನ್ಯಾಸಕ ಡಾ.ಹಯ್ಯಾಳಪ್ಪ ಹಯ್ಯಾಳಕರ್, ಸುರೇಶ, ಆನಂದ ಜೋಶಿ, ಚನ್ನಾರಡ್ಡಿ ಪಾಟೀಲ್, ನೀಲಕಂಠ ಬಡಿಗೇರ, ಬಾಬುರಾವ್ ಭೂತಾಳೆ ಮತ್ತು ಶಂಕರ ಚಪಟ್ಲಾ ಸೇರಿದಂತೆ ಇತರರಿದ್ದರು.
ಗುಣಮಟ್ಟ ಶಿಕ್ಷಣಕ್ಕೆ ಪೂರಕ ಮಾದರಿ ಕಾಲೇಜು
ಆಸ್ಪರೇಷನ್ ಯೋಜನೆಯಡಿಯಲ್ಲಿ ಆಯ್ಕೆಯಾದ ಕಾಲೇಜುಗಳನ್ನು ದೇಶದ ಎಲ್ಲಾ ಕಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ರಾಷ್ಟ್ರದಾದ್ಯಂತ ವಿಡಿಯೋ ಕಾನ್ಫರೆನ್ಸ್ ಮೂಲಕ ಡಿಜಿಟಲ್ ಲಾಂಚ್ ಮಾಡಿದ್ದಾರೆ. ಇದು ಉತ್ತಮ ಯೋಜನೆಯಾಗಿದ್ದು, ಗುಣಮಟ್ಟ ಶಿಕ್ಷಣ ಕಲ್ಪಿಸುವ ಉದ್ದೇಶ ಯೋಜನಯೆದ್ದಾಗಿದೆ. ವಿದ್ಯಾರ್ಥಿಗಳು ಸದ್ಭಳಿಕೆ ಮಾಡಿಕೊಳ್ಳಬೇಕು.
– ಎಂ.ಕೂರ್ಮಾರಾವ್. ಜಿಲ್ಲಾಧಿಕಾರಿ ಯಾದಗಿರಿ.