ಯೋಧರಿಗಾಗಿ ನಿತ್ಯ ಪ್ರಾರ್ಥನೆಯ ಸಂಕಲ್ಪ-ಗುರು ಕಾಮಾ
ಶಹಾಪುರಃ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
ಯಾದಗಿರಿ, ಶಹಾಪುರಃ ಉಗ್ರರ ಕುತಂತ್ರಕ್ಕೆ ಬಲಿಯಾದ ಭಾರತೀಯ ವೀರ ಯೋಧರಿಗೆ ನಗರದ ಬಸವೇಶ್ವರ ವೃತ್ತದಲ್ಲಿ ಸಾಮೂಹಿಕವಾಗಿ ವಿವಿಧ ಸಂಘಟನೆಗಳಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಗುರು ಕಾಮಾ ಮತ್ತು ಸಯ್ಯದ್ ಖಾದ್ರಿ ಉಗ್ರ ಸಂಘಟನೆಗಳ ಕುತಂತ್ರಕ್ಕೆ ಬಲಿಯಾದ ಭಾರತೀಯ ಯೋಧರ ಕುಟುಂಬಕ್ಕೆ ನಾವೆಲ್ಲ ಧೈರ್ಯ ತುಂಬಬೇಕಿದೆ.
ಹುತಾತ್ಮ ಯೋಧರ ಆತ್ಮಕ್ಕೆ ಭಗವಂತ ಶಾಂತಿ ನೆಮ್ಮದಿ ಕರುಣಿಸಲೆಂದು ಪ್ರಾರ್ಥನೆ ಸಲ್ಲಿಸಬೇಕಿದೆ. ನಿತ್ಯ ಮನೆಯಲ್ಲಿ ನಮಗಾಗಿ ಯಾವ ರೀತಿಯಲ್ಲಿ ದೇವರಲ್ಲಿ ಪ್ರಾರ್ಥಿನೆ ಸಲ್ಲಿಸುತ್ತೇವೆ, ಅದೇ ರೀತಿ ನಮ್ಮ ದೇಶದ ಯೋಧರಿಗೂ ಧೈರ್ಯ ಶಕ್ತಿ ಆಯುರಾರೋಗ್ಯ ಕಲ್ಪಿಸುವಂತೆ ಮತ್ತು ಅವರ ಕುಟುಂಬದ ರಕ್ಷಣೆಗೆ ದೇವನೊಲುಮೆ ಸದಾ ಇರಲಿ ಎಂದು ಕೇಳಿಕೊಂಡೆ ನಾವುಗಳು ಮನೆಯಿಂದ ಹೊರಬರುವ ರೂಢಿಯನ್ನು ಮಾಡಿಕೊಳ್ಳಬೇಕು.
ದೇಶದ ಗಡಿ ಭಾಗದಲ್ಲಿ ಯೋಧರು ನಮಗಾಗಿ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಕೆಲಸ ಮಾಡುವಾಗ ಕೇವಲ ಇಂತಹ ಕೃತ್ಯಗಳಲ್ಲಿ ಯುದ್ಧದ ಸಂದರ್ಭದಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಕೈತೊಳೆದುಕೊಳ್ಳುವಂತಾಗಬಾರದು. ಶ್ರದ್ಧಾಂಜಲಿ ಸಲ್ಲಿಸುವ ಸಮಯ ಬಾರದಿರಲಿ ಸದಾ ವಿಜಯ ಪತಾಕೆಯನ್ನು ನಮ್ಮ ಯೋಧರು ಆರಿಸಲಿ ವಿಜಯೋತ್ಸವ ಆಚರಿಸುವ ಸಮಯ ಬರಲಿ.
ಕಾರಣ ಇಂದು ನಾವೆಲ್ಲರೂ ಸಂಕಲ್ಪ ಮಾಡಬೇಕಿದೆ. ದೇಶದ ಬೆನ್ನೆಲುಬಾದ ರೈತ ಮತ್ತು ಯೋಧರ ಸ್ಮರಣೆ ಮತ್ತು ಅವರಿಗಾಗಿ ಇಷ್ಟದ ದೇವರಲ್ಲಿ ಎರಡು ನಿಮಿಷ ಪ್ರಾರ್ಥನೆ ಸಲ್ಲಿಸಬೇಕು ಎಂದು ಕರೆ ನೀಡಿದರು. ಸದಾ ಗಡಿಯಲ್ಲಿ ನಮ್ಮ ಯೋಧರು ವಿಜಯ ದುಂಧುಬಿ ಆರಿಸುತ್ತಿರಿಲಿ ದೇಶದ ಧ್ವಜ ರಾರಾಜಿಸಲಿ ಮತ್ತು ಹುತಾತ್ಮ ಯೋಧರ ಕುಟುಂಬಕ್ಕೆ ದೇವರು ದುಖಃ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿಯೇ ಹೊರ ಬರೋಣವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ಚಂದ್ರಶೇಖರ ಸುಬೇದಾರ, ಪಿಎಸ್‍ಐ ರಾಜಕುಮಾರ ಜಮಗೊಂಡ, ಖಾಲಿದ್ ಹುಸೇನ್, ಅರವಿಂದ ಉಪ್ಪಿನ್, ಅಬ್ದುಲ್ ಗೌಸ್, ಮೋಷಿನ್ ಚಾವುಶ್, ಶರಣಗೌಡ ಕಟ್ಟಿಮನಿ, ಶಿವಕುಮಾರ ತಳವಾರ, ಅಬ್ದುಲ್ ಹಾದಿಮನಿ ಸೇರಿದಂತೆ ಇತರರು ಭಾಗವಹಿಸಿದ್ದರು.