ಬಸವಭಕ್ತಿ
ದೋರನಹಳ್ಳಿಃ ಮಹಾಂತೇಶ್ವರರ ಮಹಾ ರಥೋತ್ಸವ
ಸಂಭ್ರಮದ ಶ್ರೀಮಹಾಂತೇಶ್ವರರ ಮಹಾ ರಥೋತ್ಸವ
ಯಾದಗಿರಿ, ಶಹಾಪುರಃ ತಾಲೂಕಿನ ದೋರನಹಳ್ಳಿ ಗ್ರಾಮದ ಬೆಟ್ಟದ ಶ್ರೀಮಹಾಂತೇಶ್ವರರ ಮಹಾ ರಥೋತ್ಸವವು ಸಂಭ್ರಮದಿಂದ ಭಕ್ತರ ಜಯಘೋಷ ಮಧ್ಯ ಬುಧವಾರ ಸಂಜೆ ಜರುಗಿತು.
ಭಕ್ತಾಧಿಗಳ ಹರ್ಷೋದ್ಘಾರ ಮಡುವೆ ಶ್ರೀಮಠದ ಸಾವಿರದ ದೇವರು ಶ್ರೀಮಹಾಂತ ಶಿವಾಚಾರ್ಯರು, ಚಿಕ್ಕಮಠದ ಶಿವಲಿಂಗ ಶಿವಾಚಾರ್ಯರಯ ಮತ್ತು ಶಹಾಪುರ ಫಕಿರೇಶ್ವರ ಮಠದ ಶ್ರೀಗಳ ಸಮ್ಮುಖದಲ್ಲಿ ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ನೆರದ ಭಕ್ತಾಧಿಗಳು ಉತ್ತುತ್ತಿ, ಬಾಳೆಹಣ್ಣು ರಥೋತ್ಸವ ಮೇಲೆ ಭಕ್ತಿಪೂರ್ವಕವಾಗಿ ಎಸೆದು ತಮ್ಮ ಬೇಡಿಕೆ ಈಡೇರಿಕೆಗೆ ಪ್ರಾರ್ಥನೆ ಸಲ್ಲಸಿದರು.
ರಥೋತ್ಸವ ಅಂಗವಾಗಿ ಮಹಾಂತೇಶ್ವರ ಶ್ರೀಮಠದ ಮಹಾಂತೇಶ್ವರರ ಕರ್ತೃ ಗದ್ದಗೆಗ ಬೆಳಗ್ಗೆಯಿಂದಲೇ ನೈವೇದ್ಯ ಕರ್ಪೂರ ಅರ್ಪಿಸಿ ದರ್ಶನ ಪಡೆದಿದ್ದರು. ಸಂಜೆ ರಥೋತ್ಸವದಲ್ಲಿ ಭಾಗವಹಿಸಿ ಕೃತಾರ್ಥರಾದರು.