ಪ್ರಮುಖ ಸುದ್ದಿ
HDD ಕುಟುಂಬ ಆಧುನಿಕ ಬ್ರಿಟಿಷರಿದ್ದಂತೆ-ಪ್ರೀತಂಗೌಡ ವಾಗ್ದಾಳಿ
ಮೇ.24 ಕ್ಕೆ ಯಡಿಯೂರಪ್ಪ ಮತ್ತೆ ಸಿಎಂ-ಪ್ರೀತಂ ಭವಿಷ್ಯ
ಹಾಸನಃ ಸಕಲೇಶಪುರ ಕ್ಷೇತ್ರದಲ್ಲಿ ಇಂದು ಬಿಜೆಪಿ ಲೋಕಸಭೆ ಅಭ್ಯರ್ಥಿ ಎ.ಮಂಜು ಪರವಾಗಿ ಕೈಗೊಂಡ ಪ್ರಚಾರ ಸಭೆಯಲ್ಲಿ ಹಾಸನ ಶಾಸಕ ಪ್ರೀತಂಗೌಡ ದೇವೆಗೌಡರ ಕುಟುಂಬ ವನ್ನು ಆಧುನಿಕ ಬ್ರಿಟಿಷ್ರಿದ್ದಂತೆ ಎಂದು ಹೋಲಿಕೆ ಮಾಡಿ ಹೇಳಿಕೆ ನೀಡಿದ್ದಾರೆ.
ಹಾಸನದಲ್ಲಿ ದೇವೆಗೌಡರು ಮತ್ತು ರೇವಣ್ಣ ಅವರು 50 ವರ್ಷ ದಿಂದ ಆಳುತಿದ್ದಾರೆ.
ಇದೀಗ ಮತ್ತೇ ಪ್ರಜ್ವಲ್ ಅವರನ್ನು ಲೊಕಾಸಭೆ ಕಣಕ್ಕೆ ಇಳಿಸಿದ್ದು, ಮತ್ತೆ 50 ವರ್ಷ ಹಾಸನ ಕ್ಷೇತ್ರ ಆಳಬೇಕೆಂಬ ಹಂಬಲದಲ್ಲಿದ್ದಾರೆ.
ಇವರು ಆಧುನಿಕ ಬ್ರಿಟಿಷ್ ರು ಕಾರಣ ಎಲ್ಲರೂ ಎಚ್ಚೆತ್ತುಕೊಂಡು ಬಿಜೆಪಿ ಅಭ್ಯರ್ಥಿಗೆ ಮತ ನೀಡಿ.
ಇದು ಎ.ಮಂಜು ಚುನಾವಣೆ ಅಲ್ಲ. ಇದು ಮೋದಿಯವರ ಚುಣಾಚಣೆ. ಈ ಬಾರಿ ಗೆಲ್ಲಲೇಬೇಕು. ಲೋಕಾಸಭೆಯಲ್ಲಿ ನಾವೆಲ್ಲ ಗೆದ್ದರೆ. ಯಡಿಯೂರಪ್ಪನವರು ಮತ್ತೆ ಸಿಎಂ ಆಗಲಿದ್ದಾರೆ.
ಮೇ. 23 ಕ್ಕೆಫಲಿತಾಂಶ ಹೊರಬೀಳಲಿದೆ. ಮೇ.24 ಕ್ಕೆ ಯಡಿಯೂರಪ್ಪನವರ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದಿದ್ದಾರೆ.