ಡೂಬ್ ಮರೋ ಡೂಬ್ ಮರೋ ಮೋದಿ ಅಂದಿದ್ಯಾರಿಗೆ ಗೊತ್ತೆ.?
ಯೋಧರಿಗೆ ಅಪಮಾನ ಮಾಡುವ ಬದಲು ಮುಳುಗು ಸಾಯ್ರಿ- ಮೋದಿ ವಾಗ್ದಾಳಿ
ಗಂಗಾವತಿಃ ಹಿಂದಿನ ಕಾಂಗ್ರೆಸ್ ಸರ್ಕಾರ 10% ಸರ್ಕಾರವಾಗಿತ್ತು, ಈಗ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರ 20% ಗೆ ಬಂದು ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿಜಿ ಮೈತ್ರಿ ಸರ್ಕಾರದ ಆಡಳಿತ ವಿರುದ್ಧ ಹರಿಹಾಯ್ದರು.
ನಗರದಲ್ಲಿ ಆಯೋಜಿಸಿದ್ದ ಕೊಪ್ಪಳ, ರಾಯಚೂರ ಲೋಕಸಭಾ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,
ದೇಶದ ಸೈನಿಕ ಪಡೆಗೆ ಸೇರ್ಪಡೆಯಾಗುವವರು ಎರಡೊತ್ತಿನ ಊಟಕ್ಕೆ ಗತಿ ಇಲ್ಲದವರೆಂದು ಹೇಳಿಕೆ ನೀಡಿದ ಸಿಎಂ ಕುಮಾರಸ್ವಾಮಿ ಅವರು ಜವಬ್ದಾರಿಯಿಂದ ಮಾತನಾಡಲಿ, ಸೈನಿಕರನ್ನು ಅವಮಾನಮಾಡಿದ್ದೀರಿ.
ನಿಮ್ಮ ಹೃದಯದಲ್ಲಿ ಇರುವದನ್ನೆ ಹೊರಹಾಕಿದ್ದೀರಿ. ನಿಮ್ಮನ್ನು ಜನತೆ ಕ್ಷಮಿಸಲ್ಲ. ನೀವು ಹುಟ್ಟುವಾಗಲೇ ಬಾಯಲ್ಲಿ ಚಿನ್ನದ ಚಮಚ ಇಟ್ಕೊಂಡು ಬಂದಿದ್ದೀರಿ. ಸೈನಿಕರ ತಪ್ಪಸ್ಸು ಏನಿದೆ ಎಂಬುದು ನಿಮಗೇನು ಗೊತ್ತಾಗಬೇಕು ಎಂದು ಕಿಡಿಕಾರಿದರು.
ನೀವು ದೇಶದ ಸೈನಿಕರನ್ನು ಅಪಮಾನಿಸಿದ್ಸಿರಿ ಇದೆಂಥ ಯೋಚನೆ ನಿಮ್ದು ಇದರಿಂದ ನೀವು ತಪ್ಪಿಸಿಕೊಳ್ಳಲು ಆಗಲ್ಲ. ನಿಮ್ಮಂಥವರು ಮುಳುಗಿ ಸಾಯ್ರಿ ಎಂದು ತಮ್ಮದೆ ಶೈಲಿಯಲ್ಲಿ ಡೂಬ್ ಮರೋ ಅಂತ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಸೈನಿಕರಿಂದ ಸೈನಿಕರ ಕುಟುಂಬದವರ ಮತ ಬೇಡುವದಿಲ್ಲವೇ.? ಅರೆ ಡೂಬ್ ಮರೋ ಡೂಬ್ ಮರೋ ದೇಶಕೆ ಸೈನಿಕೋಂಕೋ ಅಪಮಾನ ಕರ್ ನೇ ವಾಲೇ ಎಂದರು.
ಮೈತ್ರಿ ಸರ್ಕಾರಕ್ಕೆ ದೇಶದ ಸೈನಿಕರ ಮೇಲೆ ಗೌರವವಿಲ್ಲ. ಅವರ ಶ್ರಮ ಸೇವೆ ತ್ಯಾಗ ಎಂತಹದ್ದು ಎಂಬುದು ಗೊತ್ತೆ ಇಲ್ಲ ನಿಮ್ಗೆ ಎಂದು ವಾಗ್ದಾಳಿ ನಡೆಸಿದರು.
ಹಿಂದೆ 2014 ರಲ್ಲಿ ದೇವೇಗೌಡರು ಮೋದಿ ಪ್ರಧಾನಿಯಾದರೆ, ದೇಶ ಬಿಡುತ್ತೇನೆ ಎಂದಿದ್ದರು. ಈಗ ಮಗನ ಸರತಿ ಮೋದಿ ಪ್ರಧಾನಿಯಾದರೆ ರಾಜಕೀಯ ಸನ್ಯಾಸ ಪಡೆಯುತ್ತೇನೆ ಎಂದಿದ್ದಾರೆ.ತಂದೆಯೂ ಹಿಂದೆ ದೇಶ ಬಿಡಲಿಲ್ಲ. ಮಗನೂ ಸನ್ಯಾಸ ಸ್ವೀಕರಿಸಲ್ಲ ಇವರೆಲ್ಲ ಸುಳ್ಳಿನ ಸರದಾರರು ಎಂದು ಟೀಕಿಸಿದರು.