ಇಂದಿನ ರಾಶಿಫಲ ವಿನಯವಾಣಿ ಯಲ್ಲಿ 30-05-2019
ಶ್ರೀ ಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.
ಸಮಸ್ಯೆ ಏನೇ ಇರಲಿ ಶಾಸ್ತ್ರೋಕ್ತ ಅಂತಿಮ ಪರಿಹಾರ
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262
ಮೇಷ ರಾಶಿ
ಕಲಿಕೆಗೆ ನೀವು ಹೆಚ್ಚು ಒತ್ತು ನೀಡುವುದು ಹಾಗು ವಿಷಯದ ಸಂಪೂರ್ಣ ಜ್ಞಾನ ಪಡೆಯಲು ಆಸಕ್ತಿ ವಹಿಸುವ ನಿಮ್ಮ ಗುಣದಿಂದ ಹಲವರಿಗೆ ಮೆಚ್ಚುಗೆ ಆಗುವಿರಿ. ಕೆಲವು ಆರ್ಥಿಕ ಒಪ್ಪಂದಗಳನ್ನು ಮಾಡಿಕೊಳ್ಳುವಾಗ ಅದರ ಸಂಪೂರ್ಣ ಬದ್ಧತೆಯನ್ನು ಅರಿತುಕೊಳ್ಳುವುದು ಮುಖ್ಯ. ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಿ ನಿಶ್ಚಿಂತರಾಗಿರಿ. ವೈಯಕ್ತಿಕ ಜೀವನದಲ್ಲಿ ಮಾಡುವ ಆಚಾತುರ್ಯ ಗಳಿಂದ ನಿಮ್ಮಲ್ಲಿ ಚಿಂತೆ ಆವರಿಸುತ್ತದೆ. ಯೋಜನೆಯ ಸಫಲತೆಗೆ ವೇಗದ ತಂತ್ರಗಾರಿಕೆ ಜೊತೆಗೆ ಬುದ್ಧಿಯ ವಿವೇಚನೆ ಬಹು ಅವಶ್ಯಕ ಎಂಬುದು ನೆನಪಿಡಿ. ಪತ್ನಿಯ ಮನಸ್ಸಿನ ಆಸೆಯಂತೆ ಇಂದು ನಡೆದುಕೊಳ್ಳುವುದು ಬಹು ಉತ್ತಮ.
ಶುಭ ಸಂಖ್ಯೆ 6
ವೃಷಭ ರಾಶಿ
ಕೆಲವು ಗೊಂದಲಗಳು ನಿಮಗೆ ಆಶಾಂತಿ ನೀಡಬಹುದು, ನಿಮ್ಮ ಮನಸ್ಸಿನ ಮಾತನ್ನು ಆಲಿಸಿ ಕಾರ್ಯ ಕೈಗೊಳ್ಳಿ ನಿಶ್ಚಿತ ಗೆಲುವು ಸಾಧ್ಯ. ಪತ್ನಿಯ ಜೊತೆಗೆ ಇರುಸುಮುರುಸು ವಾತಾವರಣ ಉಂಟಾಗಲಿದೆ. ನಿಮಗೆ ಏನು ತಿಳಿದಿದೆಯೋ ಆ ವಿಚಾರದಲ್ಲಿ ಮುಂದೆ ಸಾಗಿ. ಆರ್ಥಿಕ ವ್ಯವಹಾರವನ್ನು ಆದಷ್ಟು ಗೌಪ್ಯತೆ ಕಾಪಾಡುವುದು ಒಳಿತು. ಕೌಟುಂಬಿಕ ಜವಾಬ್ದಾರಿ ನಿಮಗೆ ನೀಡುವ ಸಾಧ್ಯತೆ ಇದೆ.
ಶುಭ ಸಂಖ್ಯೆ 8
ಮಿಥುನ ರಾಶಿ
ನುಡಿದರೆ ಮುತ್ತಿನ ಹಾರದಂತಿರಬೇಕು, ಎಂಬಂತೆ ಮಾತುಗಳು ಇನ್ನೊಬ್ಬರ ಮನಸ್ಸಿಗೆ ನೋವಾಗದೆ ಇರುವಹಾಗೆ ಎಚ್ಚರದಿಂದ ಮಾತನಾಡಿ. ಹಿರಿಯರಿಗೆ ಗೌರವ ನೀಡುವುದು ಒಳಿತು. ಆರ್ಥಿಕ ರಂಗದಲ್ಲಿ ದುಸ್ತರವಾದ ಚಟುವಟಿಕೆಯು ನಡೆಯಬಹುದು. ಒಳ್ಳೆಯ ಸ್ನೇಹ ಶಾಶ್ವತವಾಗಿರಲು ಪ್ರಯತ್ನಿಸಿ. ಕೆಲವರು ಆರ್ಥಿಕ ವ್ಯವಹಾರದಲ್ಲಿ ವಂಚನೆಯ ಜಾಲವನ್ನು ಹರಡಿರಬಹುದು ಎಚ್ಚರದ ನಡೆ ಅವಶ್ಯಕತೆ ಇದೆ. ಪತ್ನಿ, ಮಕ್ಕಳು ನಿಮ್ಮ ಜೀವನದ ಸರ್ವತೋಮುಖ ಅಭಿವೃದ್ಧಿಗೆ ಬೆಂಬಲವಾಗಿ ನಿಲ್ಲುತ್ತಾರೆ, ಆದಷ್ಟು ನಿಮ್ಮ ಒತ್ತಡದ ನಡುವೆಯೂ ಅವರಿಗಾಗಿ ಸಮಯ ನೀಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸಭೆ ಸಮಾರಂಭಗಳಿಂದ ಹೊಸ ಸ್ನೇಹ ಸಂಪಾದನೆ ಆಗುವ ಸಾಧ್ಯತೆ ಇದೆ.
ಶುಭ ಸಂಖ್ಯೆ 7
ಕಟಕ ರಾಶಿ
ಉದ್ಯೋಗದಲ್ಲಿ ವಿಶಿಷ್ಟವಾದ ಸಾಧನೆ ಮಾಡುವ ಸಮಯವಿದು. ಹಣಕಾಸಿನಲ್ಲಿ ಅನಿರೀಕ್ಷಿತವಾಗಿ ಧನಲಾಭ ಆಗಲಿದೆ. ಪ್ರಣಯದಲ್ಲಿ ಇಂದು ನಿಮ್ಮ ದಿನಚರಿಯಲ್ಲಿ ನೆನಪಿಡಬೇಕಾದಂತಹ ಸನ್ನಿವೇಶ ಸೃಷ್ಟಿಸುತ್ತದೆ. ಕೆಲವು ಜಟಿಲ ಸಮಸ್ಯೆಗಳನ್ನು ಇನ್ನೊಬ್ಬರ ಸಹಾಯ ಪಡೆದು ಕೆಲಸವನ್ನು ಪೂರ್ಣಗೊಳಿಸಿ. ಹೂಡಿಕೆಗಳು ನಿಮಗೆ ಹೆಚ್ಚಿನ ಲಾಭಾಂಶ ತಂದುಕೊಡುತ್ತದೆ. ವಿಜ್ಞಾನದ ವಿಷಯವಾಗಿ ಕುತೂಹಲಕಾರಿ ಬೆಳವಣಿಗೆಗಳನ್ನು ಈದಿನ ಕಾಣಬಹುದು.
ಶುಭ ಸಂಖ್ಯೆ 2
ಸಿಂಹ ರಾಶಿ
ವಸ್ತುಗಳ ಜಾಗರೂಕತೆ ಇಂದ ಕಾಪಾಡಿಕೊಳ್ಳುವುದು ಬಹುಮುಖ್ಯ. ನಿಮ್ಮ ಮನಸ್ಸಿನಲ್ಲಿ ಏಕಾಗ್ರತೆಯನ್ನು ಬೆಳೆಸಿಕೊಳ್ಳಿ. ಕೆಲವು ಯೋಜನೆಗಳಿಗೆ ಪರಿಣಿತರ ಸಹಕಾರ ಪಡೆದುಕೊಳ್ಳುವುದು ಸೂಕ್ತ. ಜವಾಬ್ದಾರಿ ವಹಿಸಿ ಕೊಳ್ಳುವಾಗ ನೀವು ಯೋಗ್ಯರೇ ಎಂಬ ಪ್ರಶ್ನೆಯನ್ನು ನಿಮಗೆ ನೀವೇ ಹಾಕಿಕೊಳ್ಳಿ. ಸ್ನೇಹದಲ್ಲಿ ಒಳ್ಳೆಯದು-ಕೆಟ್ಟದು ಎರಡು ಇರುತ್ತದೆ ಒಳ್ಳೆಯದನ್ನು ಪಡೆಯಿರಿ ಕೆಟ್ಟದ್ದನ್ನು ಬಿಟ್ಟುಬಿಡಿ. ಸಂಗಾತಿಯ ಕೆಲವು ನಡೆಗಳಿಗೆ ಅಸಮಾಧಾನದ ಛಾಯೆ ನಿಮ್ಮಲ್ಲಿ ಮೂಡುತ್ತದೆ. ಸಂಸಾರದ ಸಮಸ್ಯೆಗಳನ್ನು ನಿಮ್ಮಲ್ಲಿಯೇ ಇತ್ಯರ್ಥ ಮಾಡಿಕೊಳ್ಳುವುದು ಉತ್ತಮ.
ಶುಭ ಸಂಖ್ಯೆ 6
ಕನ್ಯಾ ರಾಶಿ
ವಿರೋಧಿ ವರ್ಗದವರು ನಿಮ್ಮ ವಿರುದ್ಧ ಅಪಹಾಸ್ಯ ಮಾಡುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿನ ಮಾತು ಕೇಳುವುದು ಸೂಕ್ತ. ಕುಟುಂಬ ಮತ್ತು ಉದ್ಯೋಗ ಎರಡನ್ನು ಸರಿದೂಗಿಸಿಕೊಂಡು ಸಾಗುವುದು ಒಳಿತು. ಉತ್ತಮ ಸಂಘದಿಂದ ನಿಮ್ಮಲ್ಲಿ ಚೈತನ್ಯ ಹಾಗೂ ಯಶಸ್ಸಿನ ಮಾರ್ಗ ಸಿಗಲಿದೆ. ನಿಮ್ಮ ಕನಸಿನ ಯೋಜನೆ ನಿಮ್ಮ ನಿರೀಕ್ಷೆ ಮೀರಿ ಜಯ ಸಾಧನೆ ಆಗುವುದು. ನಿಶ್ಚಿತ ಹಣಕಾಸಿನ ಸಮಸ್ಯೆ ಬಗೆಹರಿಯುವ ಲಕ್ಷಣಗಳಿವೆ. ಹಣಗಳಿಕೆಯ ಕೆಲವು ಮೂಲಗಳು ನಿಮಗೆ ಗೋಚರವಾಗಲಿದೆ.
ಶುಭ ಸಂಖ್ಯೆ 3
ತುಲಾ ರಾಶಿ
ಕುಟುಂಬಸ್ಥರ ಬೇಡಿಕೆಗೆ ಸೂಕ್ತ ಸ್ಪಂದನೆ ನೀಡಿ. ಮನೆಯನ್ನು ಶುಚಿಯಾಗಿ ಇಡುವುದರಿಂದ ಎಲ್ಲರ ಆರೋಗ್ಯವನ್ನು ಕಾಪಾಡಬಹುದು. ಕಾರ್ಯಗಳಲ್ಲಿ ಆಲಸ್ಯತನದ ಕಾರ್ಮೋಡ ಆವರಿಸುತ್ತದೆ, ಇದರಿಂದ ನಿಮ್ಮ ಆರ್ಥಿಕ ಯೋಜನೆ ಕುಂಠಿತಗೊಳ್ಳಬಹುದು. ಕ್ರಿಯಾಶೀಲರಾಗಿ ಕೆಲಸದಲ್ಲಿ ಪಾಲ್ಗೊಳ್ಳುವುದು ಬಹುಮುಖ್ಯ. ವಿದ್ಯಾರ್ಥಿಗಳು ಶೈಕ್ಷಣಿಕ ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ.
ಶುಭ ಸಂಖ್ಯೆ 9
ವೃಶ್ಚಿಕ ರಾಶಿ
ಚಿನ್ನಾಭರಣದ ಹೂಡಿಕೆಯಿಂದ ಲಾಭಪಡೆಯುವ ಸಾಧ್ಯತೆ. ಹಣಕಾಸಿನ ಸ್ಥಿತಿಯು ನಿರೀಕ್ಷೆ ಮೀರಿ ಹೆಚ್ಚಾಗಲಿದೆ. ಲೇವಾದೇವಿ ವ್ಯವಹಾರವನ್ನು ಮಾಡದಿರುವುದೇ ಸೂಕ್ತ. ಕೆಲವರು ನಯವಾದ ಮಾತುಗಳಿಂದ ನಿಮ್ಮ ದಾರಿ ತಪ್ಪಿಸಬಹುದು ಆದಷ್ಟು ಜಾಗ್ರತೆ ವಹಿಸಿ. ನಿರುದ್ಯೋಗದ ಸಮಸ್ಯೆ ಅನುಭವಿಸುತ್ತಿದ್ದರೆ ನಿವಾರಣೆಯಾಗುವ ಸಾಧ್ಯತೆ ಇದೆ. ಶೈಕ್ಷಣಿಕ ದೃಷ್ಟಿಯಿಂದ ಉತ್ತಮ ಸಾಧನೆ ಮಾಡುವ ನಿರೀಕ್ಷೆ.
ಶುಭ ಸಂಖ್ಯೆ 9
ಧನಸ್ಸು ರಾಶಿ
ಗೊತ್ತಿಲ್ಲದೇ ಇರುವ ಕೆಲಸದಲ್ಲಿ ಸಹಾಯ ಪಡೆಯುವುದು ಒಳಿತು. ನಿಮ್ಮ ಕೆಲವು ವರ್ತನೆಗಳು ಉದ್ಯೋಗರಂಗದಲ್ಲಿ ಸಮಸ್ಯೆ ತಂದುಕೊಡಬಹುದು. ನಿಮ್ಮ ಆರ್ಥಿಕ ನಷ್ಟದಂತಹ ಸಮಸ್ಯೆಗೆ ಆತ್ಮೀಯ ಮಿತ್ರರು ಸಹಾಯಕ್ಕೆ ಬರುವರು. ಕೆಲವು ಸನ್ನಿವೇಶಗಳು ನಿಮಗೆ ಕೋಪ ತರಿಸುವಂತಹುದು ಆದಷ್ಟು ದೈಹಿಕವಾಗಿ ಮುನ್ನುಗ್ಗಬೇಡಿ ಶಾಂತಿ ಸಂಯಮ ಮನುಷ್ಯನ ವ್ಯಕ್ತಿತ್ವಕ್ಕೆ ಮಾದರಿಯಾಗಿರುತ್ತದೆ. ನಿಮ್ಮ ಮನಸ್ಸು ಖಿನ್ನತೆಗೆ ಜಾರುತ್ತಿದೆ ಆದಷ್ಟು ಚಟುವಟಿಕೆ ಶೀಲರಾಗಿ ಸ್ಥಿರತೆಯನ್ನು ಕಾಪಾಡಿಕೊಳ್ಳಿ. ಕೌಟುಂಬಿಕ ಸಮಸ್ಯೆಗಳಿಗೆ ಪತ್ನಿಯ ಸಹಕಾರದಿಂದ ಪರಿಹಾರ ಕಂಡುಕೊಳ್ಳುವ ಸಾಧ್ಯತೆ.
ಶುಭ ಸಂಖ್ಯೆ 4
ಮಕರ ರಾಶಿ
ನಿಮ್ಮ ಕೆಲವು ಯೋಚನೆಗಳು ಭವಿಷ್ಯತ್ತಿನ ಕಲ್ಪನೆಗೆ ದಾರಿದೀಪ ವಾಗಿರುತ್ತದೆ. ಹಿರಿಯರು ನಿಮ್ಮ ವಿಚಾರಗಳಿಗೆ ಸಹಾಯಕ್ಕೆ ಧಾವಿಸುತ್ತಾರೆ. ಬಂದಂತ ಹಣವನ್ನು ಉಳಿತಾಯ ಮಾಡುವುದು ಸೂಕ್ತ. ನಿಮ್ಮ ಹಿಂದಿನ ಯೋಜಿತ ಕಾರ್ಯವು ಸಂಪೂರ್ಣ ಯಶಸ್ಸು ಪಡೆಯುತ್ತದೆ. ಅಧಿಕ ಓಡಾಟದಿಂದ ನಿಮಗೆ ಆಯಾಸ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವು ಜನಗಳ ನ್ಯಾಯ ಪಂಚಾಯತಿಯಲ್ಲಿ ಮಧ್ಯಸ್ಥಿಕೆಯಾಗಿ ಹೋಗುವುದು ನಿಮಗೆ ಸಮಸ್ಯೆ ತಂದುಕೊಡಬಹುದು.
ಶುಭ ಸಂಖ್ಯೆ 2
ಕುಂಭ ರಾಶಿ
ನಿಮ್ಮ ಕೆಲವು ಐಷಾರಾಮಿ ತನವನ್ನು ನಿಯಂತ್ರಣದಲ್ಲಿಟ್ಟು ಭವಿಷ್ಯದ ಬಗ್ಗೆ ಯೋಚಿಸುವುದು ಒಳಿತು. ಕೆಲವು ಮಿತ್ರರು ನಿಮ್ಮನ್ನು ದಾರಿ ತಪ್ಪಿಸುವ ಸಾಧ್ಯತೆಯಿದೆ. ನಿಮ್ಮ ಉದ್ದೇಶದ ಕಾರ್ಯಗಳಿಗೆ ಅಗತ್ಯವಾದ ಬಂಡವಾಳ ಸಿಗುವ ಸಾಧ್ಯತೆ ಇದೆ. ಅತಿಯಾದ ಸೋಮಾರಿತನ ನಿಮಗೆ ಹಣಕಾಸಿನಲ್ಲಿ ನಷ್ಟವನ್ನುಂಟು ಮಾಡಬಹುದು. ನಿಮ್ಮ ವಿರುದ್ಧವಾಗಿ ಕೆಲಸದ ಸ್ಥಳದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಅನುಭವಿಸುವ ಸಾಧ್ಯತೆ ಇದೆ.
ಶುಭ ಸಂಖ್ಯೆ 5
ಮೀನ ರಾಶಿ
ನಿಮ್ಮ ಬಾಕಿ ಕೆಲಸಗಳನ್ನು ಇಂದು ಬಲುಬೇಗನೆ ಮಾಡಿಮುಗಿಸುವ ಸಾಧ್ಯತೆ ಕಂಡು ಬರುತ್ತದೆ. ಕೆಲವು ವಿಚಾರಗಳಲ್ಲಿ ನಿಮ್ಮಲ್ಲಿ ವಿಶ್ವಾಸದ ಕೊರತೆ ಕಾಣಬಹುದು. ಕಾರ್ಯಗಳ ಜಯ ಸಾಧನೆಗೆ ಬುದ್ಧಿವಂತಿಕೆ ಅತಿ ಅವಶ್ಯಕವಾಗಿದೆ. ಸ್ಪರ್ಧೆಗಳು ನಿಮ್ಮನ್ನು ಕಾಡುತ್ತದೆ, ಜಯಗಳಿಸುವ ದಾರಿ ಸ್ವಲ್ಪ ಮನಸ್ಸಿಟ್ಟು ಹುಡುಕಿದರೆ ಸಿಗಲಿದೆ. ನಿಮ್ಮಲ್ಲಿರುವ ವೇದಿಕೆಯ ಭಯವು ಇಂದು ಹೋಗುತ್ತದೆ, ನಿಮ್ಮ ಪ್ರತಿಭೆಗೆ ಪುರಸ್ಕಾರವು ಸಹ ದೊರೆಯಲಿದೆ.
ಶುಭ ಸಂಖ್ಯೆ 1
ಜ್ಯೋತಿಷ್ಯರು ಗಿರಿಧರ ಶರ್ಮ
ವಿದ್ಯೆ, ಉದ್ಯೋಗ, ವ್ಯಾಪಾರ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ಆರೋಗ್ಯ, ಸಂತಾನ, ದಾಂಪತ್ಯ, ಇನ್ನೂ ಹಲವು ಗುಪ್ತ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945098262