ಪ್ರಮುಖ ಸುದ್ದಿ
ನೇರಳೆ ಮರದ ಕೊಂಬೆ ಮುರಿದು ಬಿದ್ದು ಸುರಪುರದ ವ್ಯಕ್ತಿ ಸಾವು
ಬೆಂಗಳೂರು: ನೆಲಮಂಗಲ ತಾಲೂಕಿನ ಕೆಂಗಲ್ ಕೆಂಪೋಹಳ್ಳಿ ಸಮೀಪ ನೇರಳೆ ಹಣ್ಣು ಬಿಡಿಸುತ್ತಿದ್ದ ರಮೇಶ ಎಂಬ ವ್ಯಕ್ತಿ ಮೇಲೆ ಮರದ ಕೊಂಬೆ ಮುರಿದು ಬಿದ್ದಿದೆ. ಪರಿಣಾಮ ಗಾಯಗೊಂಡ ಸುರೇಶ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ. ಮೃತ ರಮೇಶ ಯಾದಗಿರಿ ಜಿಲ್ಲೆ ಸುರಪುರ ಮೂಲದವರು ಎಂದು ತಿಳಿದು ಬಂದಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.