ಪ್ರಮುಖ ಸುದ್ದಿ

ಗ್ರಾಮ ವಾಸ್ತವ್ಯಕ್ಕೆ ಸಿಎಂ ಚಾಲನೆ-ಪ್ರತಿ ಹಳ್ಳಿಗೆ ನೀರು ಸೌಲಭ್ಯ-HDK

ಒಂದುವರೆ ವರ್ಷದಲ್ಲಿ ಪ್ರತಿ ಹಳ್ಳಿಗೆ ನೀರು-ಕುಮಾರಸ್ವಾಮಿ

ಜಲಧಾರೆ ಯೋಜನೆಯಡಿ ನೀರು ಪೂರೈಕೆ ಸೌಲಭ್ಯ

ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸಿಎಂ ಭಾಷಣ

ಚಂಡರಕಿ ಗ್ರಾಮಃ ನಾನು ಸುಮ್ಮನೆ ಗ್ರಾಮ ವಾಸ್ತವ್ಯ ಮಾಡಲು ಬಂದಿಲ್ಲ. ಜನರ ಸಮಸ್ಯೆ ಬಗೆ ಹರಿಸಲು ಬಂದಿದ್ದೇನೆ. ಯಾವುದೇ ವಯಕ್ತಿಕ ಸಮಸ್ಯೆ ಇದ್ದರೂ ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಕೂಡಲೇ ಸ್ಪಂಧಿಸುವ ಕೆಲಸ ಮಾಡುವೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.

ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಭಾಗದ ಡಿಸಿಸಿ ಬ್ಯಾಂಕ್ ಸಾಲ ಮನ್ನಾ ಹಣ ನೀಡದ ರೈತರಿಗೆ ವಂಚಿಸಿದೆ ಎಂಬ ದೂರುಗಳು ಬಂದಿದ್ದು, ಇಲ್ಲಿ ಡಿಸಿಸಿ ಬ್ಯಾಂಕ್‍ಗೆ ಸಾಲ ಮನ್ನಾ ಸರ್ಕಾರ ಜಮೆ ಮಾಡಲಾಗಿದೆ. ಆದರೆ ಡಿಸಿಸಿ ಬ್ಯಾಂಕ್ ಅಪೆಕ್ಸ್ ಬ್ಯಾಂಕ್‍ನಿಂದ ಪಡೆದಿದ್ದ ಸುಮಾರು 140 ಕೋಟಿ ಹಣ ಕಟ್ಟದೆ ಇರುವದರಿಂದ, ಸರ್ಕಾರ ಹಾಕಿದ್ದ ಸಾಲಮನ್ನಾ ಹಣವನ್ನು ಅಪೆಕ್ಸ್ ಬ್ಯಾಂಕ್ ಮುರಿದುಕೊಂಡಿದೆ.

ಹೀಗಾಗಿ ಇಲ್ಲಿನ ರೈತರಿಗೆ ಸಮಸ್ಯೆಯಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಪಡೆದಿದ್ದು, ಸರ್ಕಾರ ಜವಬ್ದಾರಿಯಿಂದ ನುಣಚಿಕೊಳ್ಳುವ ಯಾವುದೇ ಪ್ರಶ್ನೆ ಬರುವದಿಲ್ಲ. ಕೂಡಲೇ ಅಪೆಕ್ಸ್ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್ ಅಧಿಕಾರಿಗಳ ಜೊತೆ ಮಾತನಾಡಿ ಬಗೆಹರಿಸುವ ಎಂದು ಭರವಸೇ ನೀಡಿದರು.

ಮತ್ತು ಪ್ರಸ್ತುತ ಮುಂಗಾರು ಬೆಳೆಗೆ ಹೊಸ ಸಾಲ ವಿತರಿಸಲಾಗುವದು. ರೈತರು ಯಾವುದೇ ತಪ್ಪು ಮಾಹಿತಿ ಪಡೆದುಕೊಂಡು ಹತಾಶರಾಗದಿರಿ. ಜಿಲ್ಲೆಯ ಶಹಾಪುರ, ಸುರಪುರ ಮತ್ತು ಗುರಮಠಕಲ್ ಸೇರಿದಂತೆ ಯಾದಗಿರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಸೌಲಭ್ಯ ಒದಗಿಸುವ ಕಾರ್ಯಕ್ರಮ ಹಾಕಿಕೊಂಡಿದೆ. ಜಲಧಾರೆ ಯೋಜನೆ ರೂಪಸಿದ್ದು, ಅಂದಾಜು ಸಾವಿರು ಕೋಟಿ ಅನುದಾನ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಯಾದಗಿರಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ 300 ಹಾಸಿಗೆಗೆ ಏರಿಕೆ. ಅಭಿವೃದ್ಧಿಗೆ ಕೂಡಲೇ ಸೂಚನೆ. ಆ ಮೇಲೆ ಚಂಡರಕಿ ಗ್ರಾಮದಲ್ಲಿ ಪಶು ಚಿಕಿತ್ಸಾ ಕೇಂದ್ರ ಸೇರಿದಂತೆ ಪ್ರತಿ ಹಳ್ಳಿಗೆ ನಲ್ಲಿ ಮೂಲಕ ಕುಡಿಯುವ ನೀರು ಪೂರೈಕೆ ವ್ಯವಸ್ಥೆಗೆ ಜಲಧಾರೆ ಯೋಜನೆಗೆ ಸಾವಿರ ಕೋಟಿ ಅನುದಾನ ಬಿಡುಗಡೆ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಲು ಬದ್ಧ ಎಂದು ಭರವಸೆಯನ್ನ ಸಿಎಂ ಕುಮಾಸ್ವಾಮಿ ನೀಡಿದರು.

ಶಹಾಪುರ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆಗೆ ಅಸ್ತು ನೀಡಲಾಗಿದೆ. ಮುಂದಿನ ನಾಲ್ಕು ವರ್ಷಗಳ ಕಾಲ ಮೈತ್ರಿ ಸರ್ಕಾರ ಮುಮದುವರೆಯಲಿದೆ. ಯಾರೊಬ್ಬರು ಅಭದ್ರತೆಗೊಳಿಸುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯಯೋಜನವಾಗಿಲ್ಲ  ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ್ ಹುಮನಾಬಾದ್, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ಬಂಡೆಪ್ಪ ಖಾಸಿಂಪುರ, ಸ್ಥಳೀಯ ಶಾಸಕ ನಾಗಣ್ಣಗೌಡ ಕಂದಕೂರ, ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸೇರಿದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಆಡಳಿತದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button