ವಿದ್ಯಾರ್ಥಿ ನಾಪತ್ತೆ ಪ್ರಕರಣ ಸುಖಾಂತ್ಯಕ್ಕೆ ಸುಗಮ ಯಾಕೆ ಗೊತ್ತೆ.?
ನಾಪತ್ತೆಯಾಗಿದ್ದ ವಿದ್ಯಾರ್ಥಿ ಪತ್ತೆಃ ವಿವಾದಕ್ಕೆ ಇತಿಶ್ರೀ ಹಾಕುವರೇ.?
ಶಹಾಪುರಃ ನಗರದ ಖಾಸಗಿ ಕಾಲೇಜೊಂದರಲ್ಲಿ ಶಿಕ್ಷಕನಿಂದ ಥಳಿತಕ್ಕೊಳಗಾಗಿ ನಾಪತ್ತೆಯಾಗಿದ್ದಾನೆ ಎನ್ನಲಾದ ವಿದ್ಯಾರ್ಥಿ ಪವನಕುಮಾರ ಬಸವರಾಜ ದಿವಟೆ ಇದೀಗ ಪತ್ತೆಯಾಗಿದ್ದಾನೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ವಿದ್ಯಾರ್ಥಿ ಪವನಕುಮಾರ ನಾಪತ್ತೆಕ್ಕೆ ಕಾಲೇಜಿನ ಶಿಕ್ಷಕರೊಬ್ಬರು ಥಳಿಸಿರುವುದೇ ಕಾರಣ ಎಂದು ಆರೋಪಿಸಿ ನಗರಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ಇದೀಗ ವಿದ್ಯಾರ್ಥಿ ಪವನಕುಮಾರನನ್ನು ಪಾಲಕರು ಅವರ ಸಂಬಂಧಿಕರು ಕಳೆದ ಎರಡು ದಿನದಿಂದ ಹುಡುಕಾಟದಲ್ಲಿದ್ದರು,
ಪವನಕುಮಾರ ಎರಡು ದಿನ ಯಾರ ಕೈಗೂ ಸಿಗದೆ ಅಲೆದಾಡಿದ್ದಾನೆ. ಅವನ ಹತ್ತಿರ ಹಣ ಖಾಲಿಯಾದ ನಂತರ ಅವರ ಸಂಬಂಧಿಕರು ಅಂದ್ರೆ ತಾಯಿಯ ತವರು ಮನೆ ಅವರ ಅಜ್ಜ ಅಜ್ಜಿ ಮನೆಯಾದ ಆಳಂದಗೆ ಬಂದಿದ್ದಾನೆ ಎನ್ನಲಾಗಿದೆ.
ಇದೀಗ (28-06-2019 ರ) ರಾತ್ರಿ ವೇಳೆ ಬಾಲಕ ಪತ್ತೆಯಾಗಿರುವ ವಿಷಯ ತಿಳಿದು ಬಂದಿದ್ದು, ಬಾಲಕ ಸುರಕ್ಷಿತವಾಗಿರುವುದು ಪಾಲಕರಿಗೆ ಖುಷಿ ತಂದಿದೆ ಎನ್ನಲಾಗಿದೆ.
ಆದರೆ, ಕಾಲೇಜು ಮಂಡಳಿ ಸೂಕ್ತ ಸ್ಪಂಧನೆ ನೀಡಿಲ್ಲ ಎಂದು ಪಾಲಕರು ಅಳಲು ತೋಡಿಕೊಂಡಿದ್ದಾರೆ.
ಅಲ್ಲದೆ ಮಕ್ಕಳನ್ನು ಹೆತ್ತವರೆ ಹೊಡೆಯುವಂತಿಲ್ಲ ಇನ್ನೂ ಕಾಲೇಜು ಲೇವಲಲ್ಲಿ ಶಿಕ್ಷಕರು ಯಾರ್ರಿ ಈ ಪರಿ ಹೊಡೆಯುತ್ತಾರೆ.? ಇವರಿಗೆಲ್ಲಿದೆ ಹಕ್ಕು ಎಂದು ಅವರು ಪ್ರಶಿಸುತ್ತಿದ್ದಾರೆ..
ಹೀಗಾಗಿ ಈ ಪ್ರಕರಣ ಸುಖಾಂತ್ಯ ಕಾಣಲಿದೆಯೋ ಇಲ್ಲವೋ ಗೊತ್ತಿಲ್ಲ..ಆದರೆ ವಿದ್ಯಾರ್ಥಿ ಪವನಕುಮಾರ ವಾಪಸ್ ಬಂದು ಪಾಲಕರ ಮಡಿಲು ಸೇರುತ್ತಿರುವದು ಮಾತ್ರ ಕಾಲೇಜು ಮಂಡಳಿ ಸೇರಿದಂತೆ ಎಲ್ಲರಿಗೂ ಸಂತಸದ ವಿಚಾರವೆನಿಸಿದೆ ಎಂದು ಹೇಳಬಹುದು ಅಲ್ಲವೇ.?