ಪ್ರಮುಖ ಸುದ್ದಿಸಂಸ್ಕೃತಿ

ಭಾವಸಾರ ಕ್ಷತ್ರಿಯ‌ ಸಮಾಜ ಉನ್ನತ ಸಂಸ್ಕೃತಿ, ಪರಂಪರೆ ಹೊಂದಿದೆ

ಸಮಾಜದ ಏಳ್ಗೆಗೆ ಸಂಘಟನೆ ಅಗತ್ಯ- ನವಳೆ

ಯಾದಗಿರಿಃ ಭಾವಸಾರ ಕ್ಷತ್ರೀಯ ಸಮಾಜ ಬಾಂಧವರು ಸಂಘಟಿತರಾಗುವ ಮೂಲಕ ಮುಂದಿನ ಪೀಳಿಗೆಯ ಭವಿಷ್ಯ ರೂಪಿಸಬೇಕು ಎಂದು ಭಾವಸಾರ ಕ್ಷತ್ರಿಯ ಸಮಾಜದ ರಾಜ್ಯ ಅಧ್ಯಕ್ಷ ಸುಧೀರ ನವಳೆ ಹೇಳಿದರು.

ಯಾದಗಿರಿ ಜಿಲ್ಲೆಯ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಇಲ್ಲಿನ ಚಂದ್ರಭಾಗಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದ ಅವರು,

ಭಾವಸಾರ ಕ್ಷತ್ರಿಯ ಸಮಾಜವು ಉನ್ನತ ಸಂಸ್ಕತಿ ಮತ್ತು ಪರಂಪರೆಯನ್ನು ಹೊಂದಿದ್ದು,ಇದನ್ನು ಮುಂದಿನ ಪೀಳಿಗೆ ಅನುಸರಿಸಲು ಭಾವಸಾರ ಸಮಾಜದ ಬಾಂಧವರು ಸಂಘಟಿತರಾಗುವಂತೆ ಸಲಹೆ ನೀಡಿದರು.

ಭಾರತದ ಸಾಮಾಜಿಕ ಜನಜೀವನದಲ್ಲಿ ಭಾವಸಾರ ಸಮಾಜವು ತನ್ನದೇ ಆದ ಜವಾಬ್ದಾರಿ ಪಾತ್ರ ನಿರ್ವಹಿಸುತ್ತಿದೆ.ಈ ಸಮಾಜವು ತನ್ನದೇ ಆದ ಸಂಸ್ಕøತಿ ಪರಂಪರೆಯನ್ನು ಹೊಂದಿದೆ. ಆದರೆ ಸಮಾಜವು ಸರಕಾರದ ನಿರ್ಲಕ್ಷ ಕ್ಕೆ ಒಳಗಾಗಿದೆ.

ಸರಕಾರದ ಅನೇಕ ಸೌಲಭ್ಯ ಮತ್ತು ಮೀಸಲಾತಿಗಳಿಂದ ನಾವು ವಂಚಿತ ರಾಗಿದ್ದರು, ಆರ್ಥಿಕವಾಗಿ,ರಾಜಕೀಯವಾಗಿ ನಾವು ವನವಾಸ ಅನುಭವಿಸುವಂತಾಗಿದೆ.ಕಾರಣ ಸಮಾಜವು ಸಂಘಟಿತವಾದಾಗ ಮಾತ್ರ ಸಾಮಾಜಿಕ ಅಭಿವೃದ್ದಿಯನ್ನು ಸಾಧಿಸಬಹುದು ಎಂದರು.

ಸಮಾಜದ ವಿಭಾಗೀಯ ಅಧ್ಯಕ್ಷ ಜಯವಂತರಾವ್ ಪತಂಗೆ ರಾಯಚೂರು ಮಾತನಾಡಿ, ಸಮಾಜ ಸಂಘಟನೆ ಮೂಲಕ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮವರು ಮುಂದೆ ಬರಬೇಕಾಗಿದೆ.

ಯುವಕರು ಉನ್ನತ ಶಿಕ್ಷಣ ಪಡೆಯುವದರೊಂದಿಗೆ ಸತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.

ಭಾವಸಾರ ಕ್ಷತ್ರಿಯ ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಜಿಲ್ಲೆಯ ಮಹಿಳೆಯರು, ಪದವಿಧರರಿಗೆ ಸನ್ಮಾನಿಸಿ ಪೋತ್ಸಾಹಿಸಲಾಯಿತು.

ವೇದಿಕೆ ಮೇಲೆ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ ಬೊಂಗಾಳೆ, ಮುಖಂಡರಾದ ವಿಠ್ಟಲ್‍ರಾವ್, ಹಣಮಂತ ರಾವ ಬಳಮಾಕರ, ಪಾಂಡುರಂಗ ಬಾಸುತ್ಕರ, ಲಕ್ಷ್ಮಣ್ ರಾವ್ ಪತಂಗೆ ಉಪಸ್ಥಿತರಿದ್ದರು.

ನಾಗಭೂಷಣ ಹಂಚಾಟೆ, ಯಾಲ್ಲಪ್ಪ ಹಂಚಾಟೆ, ದಿನೇಶï ಪುಲಸೆ, ಪಾಂಡುರಂಗ ನವಲೆ, ಸತೀಶ್ ಢಗೆ, ಸುಷ್ಮ ಸ್ವಾಮಿನಾಥ ಪುಲಸೆ, ಅರವಿಂದ ಸಂತೋಷ ಮಾಳದಕರ, ಹನುಮಂತ ರಾವ್ ಢಗೆ, ಶ್ರೀನಿವಾಸ ಪತಂಗೆ,ಕೃಷ್ಣಜೀ ಅಣ್ಣೆ, ಸುಭಾಷ ರಾವ್ ಪತಂಗೆ, ಮುಕೇಶಪತಂಗೆ ಸೇರಿದಂತೆ ಜಿಲ್ಲೆಯ ಸಮಾಜ ಬಾಂಧವರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button