ಪ್ರಮುಖ ಸುದ್ದಿವಿನಯ ವಿಶೇಷ

ಸ್ನೇಹ ಜೀವಿ ಮಂಜಣ್ಣನ ಅಗಲಿಕೆ ತಂದ ಬೇಸರ

ಸ್ನೇಹಿತರೆಲ್ಲರಿಗೂ ಪ್ರೀತಿಯ ಮಂಜಣ್ಣನಾಗಿದ್ದ..!

ಬಸನಗೌಡ ಪಾಟೀಲ್ ಹುಣಸಗಿ

ಆಗ ಪತ್ರಿಕೋದ್ಯಮ ಓದುವ ಸಂದರ್ಭ. ಕಲಬುರ್ಗಿ ಮೋಹನ‌ ಲಾಡ್ಜನಲ್ಲಿ room ಮಾಡಿದ್ವಿ. ಮಸ್ಕಿಯಿಂದ ಸಂಯುಕ್ತ ಕರ್ನಾಟಕ ರಿಪೋರ್ಟರ್ ಮಂಜುನಾಥ ಸಾಲಿಮಠ (ನನ್ನ ಬಲಭಾಗದಲ್ಲಿ ಎರಡನೆಯವರು ) ಜೊತೆಯಾಗಿದ್ವಿ.

ಪರೀಕ್ಷೆ ಸಂದರ್ಭದಲ್ಲಿ ಲಾಡ್ಜಲ್ಲಿ ರಾತ್ರಿ ಹೊತ್ತು ಕೂತು ಓದುತ್ತದ್ದರೆ ಮಂಜಣ್ಣ ಬೈಯೋನು. ಸುಮ್ನೆ ಮಲಕೊಳಪ ಕರೆಂಟ್ ಇದ್ರೆ ನಿದ್ರೆ ಬರಲ್ಲ ಅಂತ ಒಂದಷ್ಟು ಮದಿರೆಯ ಗುಂಗಲ್ಲಿ ಗೊಣಗಾಡ್ತಾ ಮಲಗೋನು.

ನಮ್ ರೂಮ್ ಗೆ ಪತ್ರಕರ್ತ ಮಿತ್ರರಾದ ದಿ.ಹಿಂದೂ ಪತ್ರಿಕೆಯ ಪ್ರವೀಣ ಪಾರಾ, ಸಂಜೆಕಾಲ ಸಂಪಾದಕ ರಾಜೇಶ ಪಾಟೀಲ ಯಡ್ಡಳ್ಳಿ, ಪತ್ರಿಕೋದ್ಯಮ ಕಾಲೇಜಿನ‌ ಉಪನ್ಯಾಸಕ‌ ಕೃಪಾಸಾಗರ ಗೊಬ್ಬೂರು, ವಿಜಯವಾಣಿಯ ರವೀಂದ್ರ ದೇಶಮುಖ, ವಕೀಲರಾದ ಸಂತೋಷ ಸತ್ಯಂಪೇಟೆ, ಜಗದೀಶ ಕುಲಕರ್ಣಿ, ವಿನಯವಾಣಿಯ ಸಂಪಾದಕ ಮಲ್ಲಿಕಾರ್ಜುನ ಮುದನೂರು ಜೊತೆಗೆ ನನ್ನ ಸಹಪಾಠಿ ಹಾಗೂ ನನ್ನ‌ಮಾವ ಬಾಪುಗೌಡ ಪಾಟೀಲ ಎಲ್ಲರೂ ಆಗಾಗ್ಗೆ ನಮ್ ರೂಮ್ ಗೆ ಬರೋರು. ಎಕ್ಸಾಮ್ ಬಗ್ಗೆ ಗಹನವಾದ ಚರ್ಚೆ ಮಾಡುವವರು.

ಹೀಗೆ ಒಂದು ದೊಡ್ಡ ತಂಡವೇ ಇತ್ತು. ಅದರಲ್ಲಿ ಮಸ್ಕಿಯ‌ ಮಂಜಣ್ಣ ತುಂಬಾ bold person. ಯಾವುದಕ್ಕೂ ಕ್ಯಾರೆ ಎನ್ನದವ. ಹಾಗೆ ಮುಂದೆ ಬೆಂಗಳೂರಲ್ಲೂ ಜೊತೆಯಾಗಿ ಪರೀಕ್ಷೆಗಳನ್ನು ಬರದಿದ್ವಿ.

ಅದಾದ ಮೇಲೂ ನಮ್ ಸ್ನೇಹ ಹಾಗೆಯೇ ಉಳದಿತ್ತು. ಶಹಾಪುರಕ್ಜೆ ಬಂದ್ರೆ ಮುದನೂರ ಅವರನ್ನು ಭೇಟಿಯಾಗದೇ ಹೋದವನಲ್ಲ.

ನನ್ ಮದುವೆಗೂ ಬಂದಿದ್ದ. ಯಾವಾಗಲಾದರೂ ಫೋನ್ ಮಾಡಿದಾಗ ನಿನ್ ಮದುವೆ ಮಾಡ್ಕೊಳಪ ಬೇಗ ಅಂದಾಗೆಲ್ಲಾ ತಂಗಿ ಮದುವೆ ಆದಮೇಲೆ ನನ್ ಮದುವೆ ಅಂತಿದ್ದ.

ತಂಗಿ ಮದುವೆನೂ ಮಾಡಿದ. ತಂಗಿ‌ಮದುವೆಗೆ ಮಾನ್ವಿಗೆ ಮುದನೂರು ನಾವೂ ಹೋಗಿದ್ವಿ.ತೀರ ಇತ್ತೀಚೆಗೆ ಭೇಟಿಯಾಗಿ ಬಹಳ‌ ದಿನಗಳೇ ಆಗಿತ್ತು. ಫೋನ್ ಕೂಡ‌ ಮಾಡಿರಲಿಲ್ಲ.

ಇವಾಗ ತಾನೆ ಮುದನೂರುರವರು ಫೋನ್ ಮಾಡಿ ವಿಷಯ ತಿಳಿದಾಗ ಬಹಳ ಬೇಸರ ಅನಿಸಿತು. ೨೦೦೯ ರ ದೀಪಾವಳಿ time ಅದು.

ಹಿಂದಿನ‌ ದಿನ ಮಂಜಣ್ಣಗೆ ಫೋನ್ ಮಾಡಿದೆ. ನನಗೊಂದು urgent bike ಬೇಕು. Advance book ಮಾಡೊಕಾಗಿರಲಿಲ್ಲ. ಎಲ್ಲೂ stock ಇರಲಿಲ್ಲ. ಮಸ್ಕಿನಲ್ಲಿ‌ ಸಿಗಬಹುದಾ ಅಂತ ವಿಚಾರಿಸಲು ತಿಳಿಸಿದೆ. ತಕ್ಷಣ ೫ ನಿಮಿಷ ಬಿಟ್ ಫೋನ್ ಮಾಡಿ showroom owner number ಕೊಟ್ಟ. ನನ್ ಹೆಸರು ಹೇಳಿ‌ ಮಾತಾಡು.ನಾಳೆ ಬಂದು‌ ಗಾಡಿ ತಗೊಂಡು ಹೋಗು ಅಂದ.

ಒಂದೇ ದಿನದಲ್ಲಿ advance booking ಇಲ್ಲದೆ ಗಾಡಿ ಕೊಡಿಸಿದ. Ownerಗೆ ಫೋನ್ ಮಾಡಿದರೆ ಸ್ವಲ್ಪ‌advance ನ‌ accountಗೆ ಹಾಕಿ‌ ಅಂದ. ಪುನಃ ಫೋನ್ ಮಾಡಿದಾಗ advance ಏನೂ ಕೊಡಬೇಡ‌ ಸೀದಾ ನಾಳೆ ಮಸ್ಕಿಗೆ ಬಾ ಗಾಡಿ ತಗೊಂಡು ಹೋಗು ಅಂದ.

ಬೆಳಿಗ್ಗೆ ಹೋಗಿ ಗಾಡಿ ತಗೊಂಡು ಭ್ರಂಮರಾಂಭ ದೇಗುಲವನ್ನು ತೋರಿಸಿ ಪೂಜೆ ಮಾಡಿಸಿ ಕಳುಹಿಸಿಕೊಟ್ಟಿದ್ದ. ಮಂಜಣ್ಷ ಇವತ್ತಿನಿಂದ ಬರಿ ನೆನಪಾಗಿ‌ ಉಳದಿಯಲ್ಲ.ಅದೆಷ್ಟೊ ನೆನಪುಗಳು ಮರುಕಳಿಸುತ್ತಿವೆ. RIP

Related Articles

Leave a Reply

Your email address will not be published. Required fields are marked *

Back to top button