ಪ್ರಮುಖ ಸುದ್ದಿ
ವಿಪ್ ಜಾರಿ ಪ್ರಕರಣ ಇತ್ಯರ್ಥ ಬಳಿಕ ವಿಶ್ವಾಸ ಮತ – ಮಾಜಿ ಸಿಎಂ ಸಿದ್ಧರಾಮಯ್ಯ
ಬೆಂಗಳೂರು: ಶಾಸಕರಿಂದ ವಿಪ್ ಉಲ್ಲಂಘನೆ ವಿಚಾರ ಇತ್ಯರ್ಥವಾದ ಬಳಿಕ ವಿಶ್ವಾಸ ಮತಕ್ಕೆ ಹಾಕಿ. ಅಲ್ಲಿವರೆಗೆ ವಿಶ್ವಾಸ ಮತ ಮುಂದೂಡಬೇಕೆಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಸ್ಪೀಕರ್ ರಮೇಶ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಇದು ಪಲಾಯನವಾದ ಎಂದು ತಕ್ಷಣಕ್ಕೆ ಬಿಜೆಪಿ ಸದಸ್ಯರು ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು. ಆದರೆ, ಮದ್ಯಾನ 1:40 ಆಗಿದ್ದು ಊಟದ ಸಮಯವಿದು ಎಂದು ಹೇಳಿ ಸ್ಪೀಕರ್ ರಮೇಶ ಕುಮಾರ್ 3 ಗಂಟೆವರೆಗೆ ಕಲಾಪ ಮುಂದೂಡಿದ್ದಾರೆ.
ಮದ್ಯಾನ 3 ಗಂಟೆ ಬಳಿಕ ಸದನ ಕಲಾಪ ಮತ್ತಷ್ಟು ರಂಗೇರುವ ಲಕ್ಷಣಗಳು ಕಂಡು ಬಂದಿದ್ದು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರ ವಾದ ಪ್ರತಿವಾದಗಳು ನಡೆಯಲಿದ್ದು ಸ್ಪೀಕರ್ ರಮೇಶ ಕುಮಾರ್ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆಂದು ಕಾದು ನೋಡಬೇಕಿದೆ.