ಕ್ಯಾಂಪಸ್ ಕಲರವಪ್ರಮುಖ ಸುದ್ದಿ

ಕೋಟೆನಾಡಲಿ ಕಂಡ ಕಾಮನಬಿಲ್ಲು : ಕಾಮನಬಿಲ್ಲು ಮೂಡುವುದು ಹೇಗೆ?

ಚಿತ್ರದುರ್ಗ : ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದಲ್ಲಿಂದು ಸಂಜೆ ವೇಳೆ ನೀಲಾಕಾಶದಲ್ಲಿ ಏಳುಬಣ್ಣಗಳ ಕಾಮನಬಿಲ್ಲು ಗೋಚರಿಸಿದೆ. ಬಹುದಿನಗಳ ಬಳಿಕ ಆಕರ್ಷಕವಾದ ಅಪರೂಪದ ಕಾಮನಬಿಲ್ಲು ಕಂಡಿದ್ದು ಕೋಟೆನಾಡಿನ ಜನರಲ್ಲಿ ಖುಷಿ ಮೂಡಿಸಿದೆ. ಐಮಂಗಲದ ಪೊಲೀಸ್ ತರಬೇತಿ ಶಾಲೆಯ ಪರಿಸರದಲ್ಲಂತೂ ಕಾಮನಬಿಲ್ಲು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು ಎಂಬ ಚಿತ್ರಣ ಗೋಚರಿಸಿದೆ.

 

ಏಳುಸುತ್ತಿನ ಕೋಟೆಯ ಚಿತ್ರದುರ್ಗದಲ್ಲಿ ಏಳುಬಣ್ಣದ ಕಾಮನಬಿಲ್ಲು ಮೂಡಿದ್ದು ಎಲ್ಲೆಡೆ ಕಾಮನಬಿಲ್ಲಿನ ವಿಡಿಯೋ, ಚಿತ್ರಗಳು ವೈರಲ್ ಆಗಿವೆ. ಅಂತೆಯೇ ಕಾಮನಬಿಲ್ಲು ಕುರಿತ ಕುತೂಹಲವೂ ಹೆಚ್ಚಿದೆ. ಹೀಗಾಗಿ, ಕಾಮನಬಿಲ್ಲು ಕುರಿತು ಮಾಹಿತಿ ಹೀಗಿದೆ.

ಕಾಮನಬಿಲ್ಲು

ಕಾಮನಬಿಲ್ಲು ಮೂಡುವುದು ಹೇಗೆ ?

ಮಳೆಗಾಲದ ಸಮಯದಲ್ಲಿ ಆಕಾಶದಲ್ಲಿ ಏಳು ಬಣ್ಣಗಳ ಕಾಮನಬಿಲ್ಲನ್ನು ಕಾಣಬಹುದು. ಆ ಪೈಕಿ ಮೇಲ್ಭಾಗದಲ್ಲಿ ಕೆಂಪು ಬಣ್ಣ,  ಕೆಳ ಭಾಗದಲ್ಲಿ ನೇರಳೆ ಬಣ್ಣ ಇರುತ್ತದೆ. ಕಾಮನಬಿಲ್ಲಿನ ಚಿತ್ತಾರದಲ್ಲಿ ಕಡುಗೆಂಪು, ನೀಲಿ, ನೀಲ, ಹಸಿರು, ಹಳದಿ, ಕಿತ್ತಳೆ, ಕೆಂಪು ಬಣ್ಣಗಳಿರುತ್ತವೆ. ಏಳು ಬಣ್ಣಗಳು ತರಂಗ ತರಂಗವಾಗಿ ವಿಭಜನೆಗೊಳ್ಳುತ್ತವಾದ್ದರಿಂದ ವರ್ಣಪಟಲ ಎನ್ನುತ್ತಾರೆ. ಮಳೆ ನಿಂತ ಬಳಿಕ ವಾತಾವರಣ ಸಣ್ಣ ಸಣ್ಣ ತುಂತುರು ಹನಿಗಳಿಂದ ಕೂಡಿರುವಾಗ ಸೂರ್ಯನ ಬೆಳಕು ಈ ಹನಿಗಳನ್ನು ಹಾದು ಹೋಗುವುದರಿಂದ ಈ ಏಳು ಬಣ್ಣಗಳು ಪ್ರತ್ಯೇಕಗೊಳ್ಳುತ್ತವೆ.  ಬಣ್ಣಗಳು ಮಳೆ ಹನಿಗಳ ಹಿಂಭಾಗದಿಂದ ಪೂರ್ಣವಾಗಿ ಪ್ರತಿಬಿಂಬಿತಗೊಂಡಾಗ ಏಳು ಬಣ್ಣಗಳು ಮೂಡುತ್ತವೆ. ಕೆಲ ಸಂದರ್ಭದಲ್ಲಿ ಎರಡನೇ ಕಾಮನಬಿಲ್ಲು ಸಹ ಗೋಚರಿಸುತ್ತದೆ.

Related Articles

Leave a Reply

Your email address will not be published. Required fields are marked *

Back to top button