ಪ್ರಮುಖ ಸುದ್ದಿಮಹಿಳಾ ವಾಣಿ
ಕಾಮುಕ ಕಣ್ಣು : ಸಂಕಷ್ಟಕ್ಕೆ ಸಿಲುಕಿದ ಬಾಲಿವುಡ್ ನಟಿ ಇಶಾ!
ನವದೆಹಲಿ: ಪಾರ್ಟಿಗೆಂದು ತೆರಳಿದಾಗ ಹೋಟೆಲ್ ಮಾಲೀಕ ರೋಹಿತ್ ವಿಗ್ ಕಾಮುಕ ಕಣ್ಣಲ್ಲಿ ನೋಡುವ ಮೂಲಕ ಕಣ್ಣಲ್ಲೇ ರೇಪ್ ಮಾಡಿದ್ದಾನೆ ಎಂಬುದಾಗಿ ಆರೋಪಿಸಿ ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಇಶಾ ಗುಪ್ತಾ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಶಾ ಗುಪ್ತಾ ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ಹೋಟೆಲ್ ಮಾಲೀಕ ರೋಹಿತ್ ನಟಿ ಇಶಾ ವಿರುದ್ಧ ಸಾಕೇತ್ ಕೋರ್ಟ್ ನಲ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.