ಪ್ರಮುಖ ಸುದ್ದಿ
ವಿಶ್ವಾಸ ಮತ ಮತ್ತೆರಡು ದಿನ ಮುಂದೂಡುವುದರ ಮರ್ಮವೇನು?
ಬೆಂಗಳೂರು: ವಿಶ್ವಾಸಮತಕ್ಕೆ ಮತ್ತೆರಡು ದಿನ ಕಾಲಾವಕಾಶ ನೀಡುವಂತೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಆದರೆ, ಸಿಎಂ ಹೆಚ್.ಡಿ.ಕೆ ಅವರ ಮನವಿಯನ್ನು ಸ್ಪೀಕರ್ ತಿರಸ್ಕರಿಸಿದ್ದಾರೆ.
ಇಂದು ಕಲಾಪ ಆರಂಭಕ್ಕೂ ಮುನ್ನವೇ ಜೆಡಿಎಸ್ ನಿಯೋಗದ ಜೊತೆ ಸ್ಪೀಕರ್ ಭೇಟಿಯಾದ ಸಿಎಂ ಬುಧವಾರ ತಾವು ಬಹುಮತ ಸಾಬೀತುಪಡಿಸುತ್ತೇವೆ. ಕೊನೆಯದಾದಿ ಎರಡು ದಿನ ಕಾಲಾವಕಾಶ ಕೊಡಿ ಸಾಕು ಎಂದು ಮನವಿ ಮಾಡಿದ್ದಾರೆ.
ಸಿಎಂ ಮನವಿಗೆ ಬೇಸರ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್ ಕುಮಾರ್ ಮತ್ತಷ್ಟು ವಿಳಂಬ ಮಾಡಲಾಗದು. ವಿಶ್ವಾಸಮತಕ್ಕೆ ಇನ್ನಷ್ಟು ಕಾಲಾವಕಾಶ ನೀಡಿದರೆ, ಸದನವನ್ನು ಒಪ್ಪಿಸುವುದು ಕಷ್ಟ. ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ ಎಂದಿದ್ದಾರೆ ಎಂದು ತಿಳಿದು ಬಂದಿದೆ.