ಪ್ರಮುಖ ಸುದ್ದಿ
ಕೊಳ್ಳೇಗಾಲ ಕ್ಷೇತ್ರದ ಬಿಎಸ್ ಪಿ ಶಾಸಕ ಎನ್.ಮಹೇಶ್ ಸಸ್ಪೆಂಡ್!
ಬೆಂಗಳೂರು : ಬಿಎಸ್ ಪಿ ನಾಯಕಿ ಮಾಯಾವತಿ ಸೂಚನೆ ಪಾಲಿಸದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಬಿಎಸ್ ಪಿ ಶಾಸಕ ಎನ್ . ಮಹೇಶ್ ಅವರನ್ನು ಪಕ್ಷದಿಂದ ಅಮಾನತ್ತು ಮಾಡಲಾಗಿದೆ. ಬಿಎಸ್ ಪಿ ನಾಯಕಿ ಮಾಯಾವತಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ವಿಶ್ವಾಸ ಮತ ನಿರ್ಣಯದ ವೇಳೆ ದೋಸ್ತಿ ಪಕ್ಷದ ಪರ ನಿಲ್ಲುವಂತೆ ಪಕ್ಷ ಸೂಚಿಸಿದ್ದರೂ ಎನ್.ಮಹೇಶ್ ಸದನಕ್ಕೆ ಗೈರಾದ ಪರಿಣಾಮ ಪಕ್ಷದಿಂದ ಅಮಾನತ್ತು ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶಾಸಕ ಎನ್ .ಮಹೇಶ್ ಮೈತ್ರಿ ಸರ್ಕಾರದ ಆರಂಭದಲ್ಲಿ ಸಚಿವರಾಗಿದ್ದರು. ಪಕ್ಷದ ಸೂಚನೆ ಮೇರೆಗೆ ಕಳೆದ ಲೋಕಸಭೆ ಚುನಾವಣೆಗೂ ಮೊದಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ನಿಷ್ಠೆ ಮೆರೆದಿದ್ದರು. ಇದೀಗ ದೋಸ್ತಿ ಸರ್ಕಾರ ಪತನದ ಮುನ್ಸೂಚನೆ ಇದ್ದರೂ ದೋಸ್ತಿ ಪರ ನಿಲ್ಲುವಂತೆ ಪಕ್ಷ ಸೂಚಿಸಿತ್ತು. ಶಾಸಕ ಎನ್.ಮಹೇಶ್ ಸದನದಿಂದ ದೂರ ಉಳಿದ ಕಾರಣಕ್ಕೆ ಕರ್ನಾಟಕದ ಏಕೈಕ ಬಿಎಸ್ ಪಿ ಶಾಸಕರನ್ನು ಪಕ್ಷದಿಂದ ಅಮಾನತ್ತು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.