ಪ್ರಮುಖ ಸುದ್ದಿ
ವಿಶ್ವಾಸ ಮತ ಗೆಲುವು ಸಾಧಿಸಿದ ಬಿಸ್ ವೈ : ಆರು ತಿಂಗಳು ಸೇಫ್
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ಮತ ನಿರ್ಣಯ ಮಂಡಿಸಿ ದ್ವೇಷದ ರಾಜಕಾರಣ ಮಾಡುವುದಿಲ್ಲ. ರಾಜ್ಯ ಅಭಿವೃದ್ಧಿಗಾಗಿ 3 ವರ್ಷ 10 ತಿಂಗಳು ಕಾಲ ಶ್ರಮಿಸುತ್ತೇನೆ ಎಂದರು. ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ, ಮಾಜಿ ಸಿಎಂ ಹೆಚ್.ಡಿ.ಕೆ ಅವರು ಯಡಿಯೂರಪ್ಪ ಸರ್ಕಾರ ಸಂವಿಧಾನ ಬಾಹಿರ. ಕುತಂತ್ರದಿಂದ ಬಂದ ಸರ್ಕಾರ ಎಂದು ಕಿಡಿ ಕಾರಿದರು. ಉತ್ತಮ ಆಡಳಿತ, ಅಭಿವೃದ್ಧಿ ಮಾಡಿ ತೋರಿಸಿ ಎಂದು ಸವಾಲು ಹಾಕಿದರು. ಬಳಿಕ ಯಡಿಯೂರಪ್ಪ ಮಾತನಾಡಿ ಅಭಿವೃದ್ಧಿ ಆದ್ಯತೆ ನೀಡುತ್ತೇನೆ. ಮಾತನಾಡುವುದೇ ಕೆಲಸ ಆಗಬಾರದು, ಕೆಲಸವೇ ಮಾತನಾಡಬೇಕು ಎಂಬುದು ನನ್ನ ನಂಬಿಕೆಯಾಗಿದೆ ಎಂದರು.
ಬಳಿಕ ಧ್ವನಿ ಮತದ ಮೂಲಕ ವಿಶ್ವಾಸ ಮತ ಪ್ರಕ್ರಿಯೆಗೆ ಸ್ಪೀಕರ್ ರಮೇಶ ಕುಮಾರ್ ಸೂಚಿಸಿದರು. ವಿಶ್ವಾಸ ಮತದ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಮತ ಚಲಾಯಿಸಿದ್ದು 99 ಮತಗಳು ದಾಖಲಾಗಿದ್ದರೆ, ವಿಶ್ವಾಸ ಮತದಪರವಾಗಿ ಬಿಜೆಪಿಯ 106 ಮತಗಳು ದಾಖಲಾಗುವ ಮೂಲಕ ಸಿಎಂ ಯಡಿಯೂರಪ್ಪ ವಿಶ್ವಾಸ ಮತಗೆದ್ದು ಬೀಗಿದರು.