ಬಸವಭಕ್ತಿ
ವಿನಯವಾಣಿ ‘ವಚನ ಸಿಂಚನ’ : ಆತ್ಮಯೋಗ ಸಂಬಂಧ…
ಬಯಲೊಳಗಣ ಬಣ್ಣದಂತೆ, ನೀರಿನೊಳಗಣ ಸಾರದಂತೆ,
ಅನಲ ಅನಿಲನ ಸಂಗದಿಂದ ಲಯವಾದ ಸಾಕಾರದಂತೆಯಿಪ್ಪಾತನಿರವು
ಎಂತಿದ್ದಿತ್ತು, ಅಂತೆ ಇರಬಲ್ಲಡೆ ಆತ್ಮಯೋಗಸಂಬಂಧ.
ಈ ಸಂಬಂಧದ ಸಮೂಹ ನಿಂದಲ್ಲಿ,
ಕಂಡೆಹೆ, ಕಾಣಿಸಿಕೊಂಡೆಹೆನೆಂಬ ದಂದುಗ ನಿಂದಿತ್ತು,
ಕಾಮಧೂಮ ಧೂಳೇಶ್ವರಾ.
-ಮಾದಾರ ಧೂಳಯ್ಯ