ಪ್ರಮುಖ ಸುದ್ದಿ
HIT & RUN : ಆಹಾರ ಅರಸಿ ಬಂದ ಕರಡಿ ಬಲಿ
ಶಿವಮೊಗ್ಗ : ಅಪರಿಚಿತ ವಾಹನ ಡಿಕ್ಕಿಯಿಂದಾಗ ಆಹಾರ ಅರಸಿ ನಾಡಿನತ್ತ ಹೆಜ್ಜೆ ಹಾಕಿದ್ದ ಕರಡಿ ಬಲಿಯಾದ ಘಟನೆ ಹೊಳೆಹೊನ್ನೂರಿನ ಅಗರದಹಳ್ಳಿ ಸಮೀಪ ನಡೆದಿದೆ. ಇಂದು ಬೆಳಗಿನ ಜಾವ ಆಹಾರ ಹುಡಕಿಕೊಂಡು ಹೊರಟಿದ್ದ ಕರಡಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಬಳಿಕ ವಾಹನ ಸಮೇತ ಚಾಲಕ ಪರಾರಿ ಆಗಿದ್ದಾನೆ. ಅಪಘಾತದ ಮಾಹಿತಿಯನ್ನು ಸಹ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡದೆ ಚಾಲಕ ಎಸ್ಕೇಪ್ ಆಗಿದ್ದರಿಂದ ಸಕಾಲಕ್ಕೆ ಚಿಕಿತ್ಸೆ ಸಿಗದೆ ಗಾಯಗೊಂಡ ಕರಡಿ ನರಳಿ ಸ್ಥಳದಲ್ಲೇ ಸಾವಿಗೀಡಾಗಿದೆ ಎಂದು ತಿಳಿದು ಬಂದಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತ ಕರಡಿಯನ್ನು ಶಿಫ್ಟ್ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.