ಪ್ರಮುಖ ಸುದ್ದಿ
ಹೃದಯವಿದ್ರಾವಕ ಘಟನೆ : ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ತಾಯಿ!
ಬಳ್ಳಾರಿ: ಕೌಟುಂಬಿಕ ಕಲಹದ ಪರಿಣಾಮ ಮಕ್ಕಳಿಗೆ ವಿಷವುಣಿಸಿ ತಾನೂ ವಿಷ ಸೇವಿಸಿ ತಾಯಿ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಕುರುಗೋಡು ಹಳೆ ನೆಲ್ಲೂಡಿ ಗ್ರಾಮದಲ್ಲಿ ನಡೆದಿದೆ. ಮಕ್ಕಳಾದ ಆರು ವರ್ಷದ ವರಲಕ್ಷ್ಮೀ, ಎರಡು ವರ್ಷದ ನೇತ್ರಾಗೆ ವಿಷವುಣಿಸಿ ತಾಯಿ ಶಾಂತಮ್ಮ (28) ತಾನೂ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಲಕಿ ವರಲಕ್ಷ್ಮೀ ಮತ್ತು ತಾಯಿ ಶಾಂತಮ್ಮ ಕೊನೆ ಉಸಿರೆಳೆದಿದ್ದು ಎರಡು ವರ್ಷದ ನೇತ್ರಾ ತೀವ್ರ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಬಳ್ಳಾರಿ ನಗರದ ವಿಮ್ಸ್ ಆಸ್ಪತ್ರೆಯಲ್ಲಿ ನೇತ್ರಾ ಚಿಕಿತ್ಸೆ ಪಡಿಯುತ್ತಿದ್ದು ಇಡೀ ಗ್ರಾಮದ ಜನ ಪುಟ್ಟ ಮಗುವಿನ ಜೀವ ಉಳಿಯಲಿ ಎಂದು ದೇವರಲಿ ಮೊರೆಯಿಟ್ಡಿದ್ದಾರೆ. ಘಟನಾ ಸ್ಥಳಕ್ಕೆ ಕುರುಗೋಡು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರ ತನಿಖೆಯಿಂದಷ್ಟೇ ಆತ್ಮಹತ್ಯೆ ನಿರ್ಧಾರಕ್ಕೆ ನಿಖರವಾದ ಕಾರಣ ಏನೆಂಬುದು ತಿಳಿದು ಬರಬೇಕಿದೆ.