ಪ್ರಮುಖ ಸುದ್ದಿ
ಅಮ್ಮನ ಅಸ್ಥಿ ಜತೆಗೆ ನೀರುಪಾಲಾದ ಪುತ್ರ!
ಮಂಡ್ಯ : ಮೃತ ತಾಯಿಯ ಅಸ್ಥಿ ವಿಸರ್ಜನೆಗಾಗಿ ನದಿಗೆ ಬಂದಿದ್ದ ಪುತ್ರ ನೀರುಪಾಲಾದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ಸಮೀಪದ ಕಾವೇರಿ ನದಿಯಲ್ಲಿ ನಡೆದಿದೆ. ತಾಯಿ ಅಂಬುಜಾ ಅವರ ಅಸ್ಥಿ ವಿಸರ್ಜನೆಗಾಗಿ ಬೆಂಗಳೂರಿನ ರಾಜಾಜಿನಗರದ ನಿವಾಸಿಯಾದ ಶ್ರೀಕಾಂತ್ ಕಾವೇರಿ ನದಿ ತೀರಕ್ಕೆ ಬಂದಿದ್ದರು. ಆದರೆ, ಅಸ್ಥಿ ವಿಸರ್ಜನೆ ವೇಳೆ ಆಯತಪ್ಪಿ ಬಿದ್ದು ಕಾವೇರಿ ನದಿ ನೀರು ಪಾಲಾದ ದಾರುಣ ಘಟನೆ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿ ಶಾಮಕದಳದ ಸಿಬ್ಬಂದಿ ಶವಕ್ಕಾಗಿ ಶೋಧ ಕಾರ್ಯ ನಡೆಸಿದ್ದು ಸಂಜೆ ವೇಳೆಗೆ ಶ್ರೀಕಾಂತ್ ಶವಪತ್ತೆಯಾಗಿದೆ. ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.