ಪ್ರಮುಖ ಸುದ್ದಿ
ಭರ್ತಿಯಾದ ಜಲಾಶಯ ಸುತ್ತ 20 km ವ್ಯಾಪ್ತಿ ಭೂಕಂಪ!
ಮಹಾರಾಷ್ಟ್ರ : ಕಳೆದ ಗುರುವಾರ ರಾತ್ರಿ 9:30 ರ ಸುಮಾರಿಗೆ ಸಾತಾರಾ ಜಿಲ್ಲೆಯ ಪಾಟಣ ತಾಲ್ಲೂಕಿನಲ್ಲಿರುವ ಕೊಯ್ನಾ ಜಲಾಶಯದ ಆಸುಪಾಸಿನ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ
ಭೂಮಿ ಕಂಪಿಸಿದ ಅನುಭವ ಆಗಿದೆ. 3.9 ಪ್ರಮಾಣದಲ್ಲಿ ಭೂಕಂಪನವಾಗಿದ್ದು ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ ಎಂದು ಮಹಾರಾಷ್ಟ್ರದ ಅಧಿಕಾರಿಗಳು ತಿಳಿಸಿದ್ದಾರೆ.
105 ಟಿಎಂಸಿ ನೀರು ಸಂಗ್ರಹಿಸಬಲ್ಲ ಸಾಮರ್ಥ್ಯ ಹೊಂದಿರುವ ಜಲಾಶಯ ಇದಾಗಿದ್ದು ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಮಹಾರಾಷ್ಟ್ರ ದಲ್ಲಿ ಭಾರೀ ಮಳೆಯಾಗಿದ್ದು ಕೊಯ್ನಾ ಡ್ಯಾಮ್ ಭರ್ತಿ ಆಗಿದೆ. ಇದೇ ಸಂದರ್ಭದಲ್ಲಿ ಭೂಮಿ ಕಂಪಿಸಿದ್ದು ಜಲಾಶಯದ ಸುತ್ತಮುತ್ತಲಿನ ಹಳ್ಳಿ ಜನರಲ್ಲಿ ಆತಂಕ ಮೂಡಿಸಿದೆ. ಪರಿಣಾಮ ಮಹಾರಾಷ್ಟ್ರ ಸರ್ಕಾರ ಕೊಯ್ನಾ ಜಲಾಶಯದ ನೀರು ಕರ್ನಾಟಕಕ್ಕೆ ಹರಿಸಿದರೆ ಕೃಷ್ಣಾನದಿ ತೀರದಲ್ಲಿ ಪ್ರವಾಹ ಸೃಷ್ಟಿ ಆಗುವ ಸಾಧ್ಯತೆಯಿದೆ.