ಪ್ರಮುಖ ಸುದ್ದಿ
ಪೊಲೀಸರಿಗೆ ಬಿಗ್ ಶಾಕ್ : ಔರಾದ್ಕರ್ ವರದಿ ಜಾರಿ ಡೌಟ್
ಬೆಂಗಳೂರು : ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವ ಕೆಲದಿನಗಳ ಮುನ್ನ ಔರಾದ್ಕರ್ ವರದಿ ಜಾರಿಗೊಳಿಸಿದ್ದರು. ಪರಿಣಾಮ ಪೊಲೀಸ್ ಇಲಾಖೆಯ ಸಿಬ್ಬಂದಿ ಫುಲ್ ದಿಲ್ ಖುಷ್ ಆಗಿತ್ತು. ಆದರೆ, ಔರಾದ್ಕರ್ ವರದಿ ಜಾರಿಗೊಳಿಸಿರುವುದಾಗಿ ಘೋಷಿಸಿದ ಕುಮಾರಸ್ವಾಮಿ ಈಗ ಮಾಜಿ ಆಗಿದ್ದಾರೆ. ಇದೀಗ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಔರಾದ್ಕರ್ ವರದಿ ಜಾರಿ ಬಗ್ಗೆ ಅಷ್ಟಾಗಿ ಆಸಕ್ತಿ ಹೊಂದಿಲ್ಲ ಎನ್ನಲಾಗುತ್ತಿದೆ. ಈ ಮಾತಿಗೆ ಪುಷ್ಠಿ ನೀಡುವಂತೆ ಇಂದು ಅಧಿಕಾರಿಗಳ ಸಭೆ ಬಳಿಕ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ ಔರಾದ್ಕರ್ ವರದಿ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಹಣಕಾಸಿನ ಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಷ್ಟೇ ಹೇಳಿದ್ದಾರೆ. ಆ ಮೂಲಕ ಸದ್ಯಕ್ಕೆ ಔರಾದ್ಕರ್ ವರದಿ ಜಾರಿ ಡೌಟ್ ಎಂಬ ಸಂದೇಶ ನೀಡಿದ್ದಾರೆ.