ಸರಣಿ
ಹೂವಿನಹೆಡಗಿ, ಕೊಳ್ಳೂರು ಸೇತುವೆ ಜಲಾವೃತ : ಸಂಚಾರ ಸ್ಥಗಿತ
ಯಾದಗಿರಿ : ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಕೃಷ್ಣ ನದಿ ತುಂಬಿ ಹರಿಯುತ್ತಿದ್ದು ನದಿತೀರದಲ್ಲಿ ಪ್ರವಾಹ ಭೀತಿ ಸೃಷ್ಠಿ ಆಗಿದೆ. ಕೊಳ್ಳೂರು ಸೇತುವೆ ಜಲಾವೃತಗೊಂಡಿದ್ದು ಮುಂಜಾಗೃತ ಕ್ರಮವಾಗಿ ಪೊಲೀಸರು ಸೇತುವೆ ಮೇಲೆ ಸಂಚಾರ ಸ್ಥಗಿತಗೊಳಿಸಿದ್ದಾರೆ. ಹೂವಿನಹೆಡಗಿ ಸೇತುವೆಯೂ ಜಲಾವೃತಗೊಂಡಿದ್ದು ಸೇತುವೆ ಮೇಲೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಪರಿಣಾಮ ದೇವದುರ್ಗ ಮತ್ತು ಶಹಾಪುರ ನಡುವಿನ ಸಂಪರ್ಕ ಕಡಿತಗೊಂಡಿದೆ.