ಪ್ರಮುಖ ಸುದ್ದಿ
ರಾಜ್ಯಸಭೆಯಲ್ಲಿ ಪಿಡಿಪಿ ಸಂಸದರ ಪುಂಡಾಟ
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಬಗ್ಗೆ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ವಿಧೇಯಕ ಮಂಡಿಸುತ್ತಿದ್ದಂತೆ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಸಂಸದ ಮಿರ್ ಮೊಹಮ್ಮದ್ ಫಯಾಜ್ ಸಂವಿಧಾನದ ಪ್ರತಿಯನ್ನು ಹರಿದು ಉದ್ಧಟತನ ಪ್ರದರ್ಶಿಸಿದ್ದಾರೆ. ಪರಿಣಾಮ ಸಂಸದ ಫಯಾಜ್ ವಿರುದ್ಧ ಗರಂ ಆದ ರಾಜ್ಯ ಸಭಾ ಅಧ್ಯಕ್ಷ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕೂಡಲೇ ಸದನದಿಂದ ಫಯಾಜ್ ಗೆ ಆಚೆ ಹೋಗಲು ಹೇಳಿ ಮಾರ್ಷಲ್ ಗಳನ್ನು ಕರೆದು ಹೊರಹಾಕುವಂತೆ ಸೂಚನೆ ನೀಡಿದರು. ಅದೇ ವೇಳೆ ಪಿಡಿಪಿಯ ಇನ್ನೋರ್ವ ಸಂಸದ ನಾಜಿರ್ ಅಹ್ಮದ್ ತಮ್ಮ ಮೈಮೇಲಿನ ಬಟ್ಟೆ ಹರಿದುಕೊಂಡು ಪುಂಡಾಟ ಪ್ರದರ್ಶಿಸಿ ಸದನದಿಂದ ಆಚೆ ನಡೆದರು.