ಪ್ರಮುಖ ಸುದ್ದಿ
ಆರ್ಟಿಕಲ್ 370 ರದ್ದು : ಬಿಜೆಪಿಗೆ ಮಿತ್ರಪಕ್ಷದ ವಿರೋಧ, ವಿಪಕ್ಷಗಳ ಬೆಂಬಲ!
ನವದೆಹಲಿ : ರಾಜ್ಯಸಭೆಯಲ್ಲಿಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದ ಜಮ್ಮು-ಕಾಶ್ಮೀರಕ್ಕೆ ನೀಡಿದ ಆರ್ಟಿಕಲ್ 370ರದ್ದು ವಿಧೇಯಕ ವಿರೋಧದ ನಡುವೆ ಅಂಗೀಕಾರ ಆಗಿದೆ. ಪಿಡಿಪಿ, ಕಾಂಗ್ರೆಸ್ ಪಕ್ಷ ಸೇರಿ ವಿವಿಧ ಪಕ್ಷಗಳು ಕೇಂದ್ರ ಸರ್ಕಾರದ ನಿರ್ಣವನ್ನು ತೀವ್ರವಾಗಿ ವಿರೋಧಿಸಿವೆ. ಆದ್ರೆ, ಬಿಜೆಪಿ ಮಿತ್ರ ಪಕ್ಷವಾದ ಜೆಡಿಯು ಪಕ್ಷ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿದೆ. ಜೆಡಿಯು ನಾಯಕ ನಿತೀಶ್ ಕುಮಾರ್ ನೇತೃತ್ವದಲ್ಲಿ ಜೆಪಿ ನಾರಾಯಣ್, ಲೋಹಿಯಾ, ಜಾರ್ಜ್ ಫರ್ನಾಂಡಿಸ್ ಸಿದ್ಧಾಂತಗಳನ್ನು ಹೊಂದಿದ್ದೇವೆ. ನಾವು 370 ವಿಧಿ ರದ್ದುಗೊಳಿಸಬಾರದೆಂಬುದು ನಮ್ಮ ನಿಲುವು ಎಂದು ಜೆಡಿಯು ನಾಯಕ ಕೆ.ಸಿ.ತ್ಯಾಗಿ ಹೇಳಿದ್ದಾರೆ.
ಆದರೆ. ಆರ್ಟಿಕಲ್ 370 ರದ್ದುಗೊಳಿಸುವುದಕ್ಕೆ ನಮ್ಮ ವಿರೋಧವಿಲ್ಲ ಎಂದು ಬಿಎಸ್ಪಿ ರಾಜ್ಯಸಭಾ ಸದಸ್ಯ ಸತೀಶ್ ಚಂದ್ರ ಮಿಶ್ರಾ ಹೇಳಿದ್ದಾರೆ. ಅಂತೆಯೇ ಬಿಜೆಡಿ ನಾಯಕರಾದ ಪ್ರಸನ್ನ ಆಚಾರ್ಯ ಸಹ ಬೆಂಬಲ ಸೂಚಿಸಿದ್ದಾರೆ. ಇನ್ನೊಂದೆಡೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಹ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.