ಪ್ರಮುಖ ಸುದ್ದಿ
370 ವಿಧಿ ರದ್ದು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿ!
ಕಾಶ್ಮೀರದ ನಾಯಕತ್ವಕ್ಕೆ ಕೇಂದ್ರ ಸರ್ಕಾರ ಉಗ್ರರಿಗೆ ಅವಕಾಶ ಕಲ್ಪಿಸಿದಂತಾಗಿದೆ –ರಾಹುಲ್
ನವದೆಹಲಿ : ಜಮ್ಮು ಮತ್ತು ಕಾಶ್ಮೀರನ್ನು ತುಂಡಾಗಿಸುವುದು ಏಕಪಕ್ಷೀಯ ನಿರ್ಧಾರವಾಗಿದೆ. ಚುನಾಯಿತ ಪ್ರತಿನಿಧಿಗಳನ್ನು ಬಂಧನದಲ್ಲಿಡುವುದು ಮತ್ತು ಸಂವಿಧಾನದ ನಿಯಮ ಉಲ್ಲಂಘಿಸುವ ಮೂಲಕ ರಾಷ್ಟ್ರೀಯ ಏಕೀಕರಣ ಸಾಧಿಸಲಾಗದು. ಈಗ ಕಾಶ್ಮೀರದ ನಾಯಕತ್ವಕ್ಕಾಗಿ ಕೇಂದ್ರ ಸರ್ಕಾರವೇ ಉಗ್ರರಿಗೆ ಅವಕಾಶ ಕಲ್ಪಿಸಿದಂತಾಗಿದೆ. ಈ ರಾಷ್ಟ್ರವನ್ನು ಜನರು ನಿರ್ಮಿಸಿದ್ದಾರೆ, ಭೂಮಿ ಅಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು ಕೇಂದ್ರ ಸರ್ಕಾರ ಅಧಿಕಾರ ದುರುಪಯೋಗದ ಪರಿಣಾಮ ರಾಷ್ಟ್ರೀಯ ಭದ್ರತೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಕೇಂದ್ರದ ನಿರ್ಧಾರ ಮುಂದಾಲೋಚನೆ ಇಲ್ಲದ ಮತ್ತು ಮೂರ್ಖತನದಿಂದ ಕೂಡಿದೆ ಎಂದು
ರಾಹುಲ್ ಕಿಡಿಕಾರಿದ್ದಾರೆ. ಕಾಶ್ಮೀರದ ರಾಜಕೀಯ ನಾಯಕರನ್ನು ರಹಸ್ಯ ಸ್ಥಳಗಳಲ್ಲಿ
ಬಂಧಿಸಿಡಲಾಗಿದೆ. ಇದು ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ಆಗಿದ್ದು ಕೂಡಲೇ ಬಂಧಿತ ನಾಯಕರನ್ನು
ಬಿಡುಗಡೆಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.