ಪ್ರಮುಖ ಸುದ್ದಿ

ಪಕ್ಷ ಸಂಘಟನೆಗೆ ಪಣತೊಟ್ಟ ದಣಿವರಿಯದ ದೇವೇಗೌಡರು : ಸಮಾವೇಶಗಳ ಪರ್ವ ಶುರು

ಬೆಂಗಳೂರು : ಮೈತ್ರಿ ಸರ್ಕಾರ ರಚಿಸಿ ತಪ್ಪು ಮಾಡಿದ್ದೇವೆ. ಸದ್ಯ ಜೆಡಿಎಸ್ ಪಕ್ಷ ತೀವ್ರ ಸಂಕಷ್ಟದ ಸ್ಥಿತಿಯಲ್ಲಿದೆ. ಪಕ್ಷದ ಸಂಘಟನೆಯತ್ತ ನಾವೆಲ್ಲ ಗಮನ ಹರಿಸಬೇಕಿದೆ ಎಂದು ಮಾಜಿ ಪ್ರಧಾನಿ , ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ  ಕೈ ತಪ್ಪಿ ಹೋದ ಪ್ರಮುಖ 3 ಜಿಲ್ಲೆಯ ಜನ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತೇನೆ ಎಂದಿದ್ದಾರೆ.

ರಾಜ್ಯದ ಜನರ ಬಳಿಗೆ ತೆರಳಲು ವಿವಿಧ ಸಮಾವೇಶ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಇದೇ ತಿಂಗಳಲ್ಲಿ ಮಹಿಳಾ ಸಮಾವೇಶ ನಡೆಸಲು ಚಿಂತನೆ ನಡೆದಿದೆ. ಬಳಿಕ ಹಿಂದುಳಿದ ಹಾಗೂ ಮುಸ್ಲಿಂ ಸಮುದಾಯದ ಸಮಾವೇಶ, ಉತ್ತರ ಕರ್ನಾಟಕದಲ್ಲಿ ರೈತ ಸಮಾವೇಶ ಆಯೋಜಿಸಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು. ಯಾವ ಗಳಿಗೆಯಲ್ಲಿ ಚುನಾವಣೆ ಬಂದರೂ ಸಿದ್ಧರಾಗಬೇಕಿರುವ ಕಾರಣ ಬರುವ ಸೆಪ್ಟಂಬರ್​ ತಿಂಗಳಲ್ಲೇ ಸಮಾವೇಶಗಳನ್ನು ಆಯೋಜಿಸುತ್ತೇವೆಂದು ದೇವೇಗೌಡರು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button