ಪ್ರಮುಖ ಸುದ್ದಿ

ನೆಮ್ಮದಿ ಹಾಳುಗೆಡುವಲು ಕಾರಣರಾಗದಿರಿ-ಸಿಪಿಐ ಹನುಮರಡ್ಡೆಪ್ಪ

ಸೌಹಾರ್ಧತೆಯಿಂದ ಬಕ್ರೀದ್ ಹಬ್ಬ ಆಚರಿಸಲು ಕರೆ

ಯಾದಗಿರಿ, ಶಹಾಪುರಃ ಬೆಟ್ಟದ ಮೇಲೆ ಬುದ್ಧ ಮಲಗಿರುವ ದೃಶ್ಯವನ್ನು ಪ್ರಕೃತಿಯ ನಿರ್ಮಾಣ ಮಾಡಿರುವ ಅದ್ಭುತವಾದ ಸ್ಥಳ ಹೊಂದಿರುವ ನಗರವಿದು. ಜಗತ್ತಿನಲ್ಲಿಯೇ ಶಾಂತಿಧೂತ ಎಂದು ಹೆಸರುವಾಸಿಯಾದಿ ಸಾಕ್ಷಾತ್ ಬುದ್ಧ ನಿಮ್ಮ ನಗರದಲ್ಲಿ ನೆಮ್ಮದಿಯಿಂದ ಮಲಗಿರುವಾಗ, ಅದಕ್ಕೆ ಕಳಂಕ ತರುವ ಕೆಲಸ ಇಲ್ಲಿ ಎಂದಿಗೂ ನಡೆಯಬಾರದು ಎಂದು ನಗರ ಪೊಲೀಸ್ ಠಾಣೆಯ ಸಿಪಿಐ ಹನುಮರಡ್ಡೆಪ್ಪ ತಿಳಿಸಿದರು.

ನಗರ ಠಾಣೆಯಲ್ಲಿ ಮುಸ್ಲಿಂ ಬಾಂಧವರ ಬಕ್ರೀದ್ ಹಬ್ಬ ಅಂಗವಾಗಿ ಮುಂಜಾಗೃತವಾಗಿ ಕರೆದ ಶಾಂತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಲ್ಲಿನ ಪ್ರಕೃತಿ ಕೊಡುಗೆಯಲ್ಲಿಯೇ ಶಾಂತಿ, ನೆಮ್ಮದಿ ಅಡಗಿರುವಾಗ ಇಲ್ಲಿನ ಜನರು ಅದಕ್ಕೆ ಪೂರಕವಾಗಿ ಪರಸ್ಪರರು ಸಹೋದರ ಬಾಂಧ್ಯವದಿಂದ ಬದುಕಬೇಕು. ಹಿಂದೂ ಮುಸ್ಲಿಂ ಯಾವುದೇ ಹಬ್ಬ ಹರಿದಿನಗಳಲ್ಲಿ ಪರಸ್ಪರರು ಪ್ರೀತಿ, ವಿಶ್ವಾಸ ಸಹಕಾರ ಮನೋಭಾವದಿಂದ ಬಾಳಬೇಕೆಂದು ಕರೆ ನೀಡಿದರು.

ಅದೇ ರೀತಿ ಇಲ್ಲಿಯವರೆಗೂ ಇಲ್ಲಿನ ಹಿಂದೂ ಮತ್ತು ಮುಸ್ಲಿಂ ಬಾಂಧವರು ಅನ್ಯೋನ್ಯವಾಗಿಯೇ ಬಂದಿದ್ದಾರೆ. ಯಾರೋ ಕಿಡಿಗೇಡಿಗಳಿಂದ ಪವಿತ್ರ ಹಬ್ಬ ಹರಿದಿನಗಳು ಆಚರಣೆ ಹಾಳಾಗುವದು ಬೇಡ. ಆ.12 ರಂದು ಬಕ್ರೀದ್ ಹಬ್ಬ ಆಚರಣೆ ನಡೆಯಲಿದ್ದು, ಆಯಾ ಸಮುದಾಯದ ಹಿರಿಯರು ಜವಬ್ದಾರಿಯುತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆವಹಿಸಬೇಕು.

ಯಾವುದೇ ಸಮುದಾಯಕ್ಕೆ ಧಕ್ಕೆ ಬರುವಂತೆ ನಡೆದುಕೊಳ್ಳಬಾರದು. ಉಹಾಪೋಹ ಸುದ್ದಿಗಳಿಗೆ ಕಿವಿಗೊಡಬಾರದು. ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತಿದೆ. ಕಾನೂನು ಮೀರಿ ವರ್ತಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸಣ್ಣ ನಿಂಗಪ್ಪ ನಾಯ್ಕೋಡಿ, ಶಾಂತಪ್ಪ ನಾಯ್ಕೋಡಿ, ಎಸ್.ಎಂ.ಜಾನಿ, ಸಯ್ಯದ್ ಮುಸ್ತಾಫ ದರ್ಬಾನ್, ನಗರಸಭೆ ಸದಸ್ಯರಾದ ಲಾಲನಸಾಬ್ ಖುರೇಶಿ, ಮಲ್ಲಿಕಾರ್ಜುನ ಗಂಗಾಧರಮಠ, ಶಿವಕುಮಾರ ತಳವಾರ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರು ಕಾಮಾ, ಸಯ್ಯದ್ ಖಾಲಿದ್, ನಗರಸಭೆ ಮಾಜಿ ಅಧ್ಯಕ್ಷ ನಾಗಪ್ಪ ತಹಸೀಲ್ದಾರ, ಸಂತೋಷ ಭಾಸುತ್ಕರ್, ಅಪ್ಪಣ್ಣ ದಶವಂತ, ಸತೀಶ ಪಂಚಬಾವಿ, ಹಣಮಂತ್ರಾಯ ರಾಖಂಗೇರಾ ಸೇರಿದಂತೆ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button