ಪ್ರಮುಖ ಸುದ್ದಿ
ಯಾದಗಿರಿ: ಭೀಮಾತೀರದಲ್ಲಿ ನಾಪತ್ತೆ ಆಗಿದ್ದ ಯುವಕನ ಶವಪತ್ತೆ!
(ಸಾಂದರ್ಭಿಕ ಚಿತ್ರ)
ಯಾದಗಿರಿ: ಪ್ರವಾಹದ ವೇಳೆ ತಾಲೂಕಿನ ಕೌಳುರು ಗ್ರಾಮದ ಬಳಿ ನದಿತೀರದಲ್ಲಿದ್ದ ಪಂಪ್ ಸೆಟ್ ತೆರವುಗೊಳಿಸಲು ಹೋಗಿ ನೀರು ಪಾಲಾಗಿದ್ದ ಸಾಬರೆಡ್ಡಿ ಡೊಂಗೇರ್ (34) ಮೃತದೇಹ ಇಂದು ಭೀಮಾನದಿ ತೀರದಲ್ಲಿ ಪತ್ತೆ ಆಗಿದೆ.
ಎರಡು ದಿನದ ಹಿಂದೆ ನದಿತೀರದ ಪಂಪ್ ಸೆಟ್ ತೆರವಿಗೆ ತೆರಳಿದ್ದ ಸಾಬರೆಡ್ಡಿ ರಕ್ಷಣೆಗೆ ಸಹೋದರ ಹಾಗೂ ಗ್ರಾಮಸ್ಥರು ಮುಂದಾಗಿದ್ದರು. ಆದರೆ, ಹಗ್ಗದಿಂದಾಗಿ ಎದೆಗೆ ನೋವಾಗುತ್ತಿದೆ ಬಿಟ್ಟುಬಿಡಿ ನಾನು ಈಜಿ ದಡಕ್ಕೆ ಬರುತ್ತೇನೆ ಎಂದು ಸಾಬರೆಡ್ಡಿ ಹೇಳಿದಾಗ ಹಗ್ಗ ಬಿಡಲಾಗಿತ್ತು. ನೀರಿಗೆ ಬಿದ್ದ ಸಾಬರೆಡ್ಡಿ ನಾಪತ್ತೆಯಾಗಿದ್ದು ಇಂದು ಶವವಾಗಿ ಪತ್ತೆ ಆಗಿದ್ದಾನೆ.