ಬಸವಭಕ್ತಿ
ವಿನಯವಾಣಿ ‘ವಚನ ಸಿಂಚನ’ : ಕೆರೆಯ ನೀರು, ಮರದ ಪುಷ್ಪ…
ಕೆರೆಯ ನೀರು, ಮರದ ಪುಷ್ಪ ಧರಿಸಿದಡೇನು ಅಯ್ಯಾ,
ಆಗುವುದೆ ಆಗುವುದೆ ಲಿಂಗಾರ್ಚನೆ?
ನೀರೆರೆಯಕ್ಕಾತನೇನು ಬಿಸಿನಿಂದ ಬಳಲಿದನೆ?
ಪುಷ್ಪದಿಂದ ಧರಿಸಕ್ಕಾತನೇನು ವಿಟರಾಜನೆ?
ನಿನ್ನ ಮನವೆಂಬ ನೀರಿಂದ,
ಜ್ಞಾನವೆಂಬ ಪುಷ್ಪಂದ ಪೂಜಿಸಬಲ್ಲಡೆ
ಭಕ್ತನೆಂಬೆ, ಮಹೇಶ್ವರನೆಂಬೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
–ಸಿದ್ಧರಾಮೇಶ್ವರ