ಪ್ರಮುಖ ಸುದ್ದಿ
ರಂಗನತಿಟ್ಟು ಪಕ್ಷಿಧಾಮಕ್ಕೂ ಮುಳುಗಡೆ ಭೀತಿ!
ಮಂಡ್ಯ : ಕೆಆರ್ ಎಸ್ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್ ನೀರು ಬಿಡುಗಡೆಗೊಳಿಸಲಾಗಿದೆ. ಪರಿಣಾಮ ಕಾವೇರಿ ತೀರದಲ್ಲಿದರುವ ರಂಗನತಿಟ್ಟು ಪಕ್ಷಿಧಾಮ ಪ್ರವಾಹಕ್ಕೆ ಸಿಲುಕುವ ಭೀತಿ ಸೃಷ್ಠಿ ಆಗಿದೆ. ಪರಿಣಾಮ ಬೋಟಿಂಗ್ ಸ್ಥಗಿತಗೊಳಿಸಿರುವ ಅರಣ್ಯಾಧಿಕಾರಿಗಳು ಪಕ್ಷಿಧಾಮ ರಕ್ಷಣೆಗೆ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದ್ದಾರೆ. ಅರಣ್ಯಧಿಕಾರಿ ಅಲೆಗ್ಸಾಂಡರ್ ಪಕ್ಷಿಧಾಮಕ್ಕೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಿದ್ದು ಪಕ್ಷಿಗಳ ರಕ್ಷಣೆಗೆ ತ್ವರಿತಗತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸಿಬ್ಬಂದಿಗೆ ನಿರ್ದೇಶನ ನೀಡಿದ್ದಾರೆ.