ಪ್ರಮುಖ ಸುದ್ದಿ
ಗುಂಡ್ಲುಪೇಟೆಯಲ್ಲಿ ಒಂದೇ ಕುಟುಂಬದ ಐವರು ಗುಂಡೇಟಿಗೆ ಬಲಿ!
ಚಾಮರಾಜನಗರ : ಗುಂಡ್ಲುಪೇಟೆ ಪಟ್ಟಣದ ಹೊರವಲಯದಲ್ಲಿ ಒಂದೇ ಕುಟುಂಬದ ಐವರು ಗುಂಡು ಹಾರಿಸಿಕೊಂಡು ಸಾಮೂಹಿಕ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ನಡೆದಿದೆ. ನಿನ್ನೆ ಮೈಸೂರಿನಿಂದ ಬಂದಿದ್ದ ಐವರು ಖಾಸಗಿ ಲಾಡ್ಜ್ ನಲ್ಲಿ ರೂಮ್ ಪಡೆದಿದ್ದರು. ಇಂದು ಬೆಳಗಿನ ಜಾವ ಪಟ್ಟಣದ ಹೊರವಲಯಕ್ಕೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದು ಬಂದಿದೆ.
ಮೃತರನ್ನು ಮೈಸೂರಿನ ದಟ್ಟಗಳ್ಳಿ ಮೂಲದ ಓಂಪ್ರಕಾಶ್ , ಪತ್ನಿ ನಿಖಿತ, ಆರ್ಯಕೃಷ್ಣ, ಹೇಮಲತಾ, ನಾಗರಾಜು ಭಟ್ಟಾಚಾರ್ಯ ಎಂದು ಗುರುತಿಸಲಾಗಿದೆ. ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಕುಟುಂಬ ಮನನೊಂದು ಆತ್ಮಹತ್ಯೆಗೆ ಶರಣಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಗುಂಡ್ಲುಪೇಟೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.