ಪ್ರಮುಖ ಸುದ್ದಿ
ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ : ಲಕ್ಷ್ಮಣ್ ಸವದಿ, ಸಿ.ಸಿ.ಪಾಟೀಲ್ ಗೆ ಮಂತ್ರಿ ಸ್ಥಾನ?
ಬೆಂಗಳೂರು : ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರ ನೋಡಿರುವ ಆರೋಪ ಹೊತ್ತಿರುವ ಸಿ.ಸಿ.ಪಾಟೀಲ್ ಹಾಗೂ ಮಾಜಿ ಶಾಸಕ ಲಕ್ಷ್ಮಣ ಸವದಿಗೆ ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ತಾನಾಗಿಯೇ ವಿರೋಧ ಪಕ್ಷಗಳಿಗೆ ಅಸ್ತ್ರ ನೀಡಿದಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬೆಳಗಾವಿಯಲ್ಲಿನ ಘಟಾನುಘಟಿ ನಾಯಕರನ್ನು ಹೊರಗಿಟ್ಟು ಮಾಜಿ ಶಾಸಕ ಲಕ್ಷ್ಮಣ ಸವದಿಗೆ ಸ್ಥಾನ ನೀಡಲಾಗಿದ್ದು ಸಹ ಪಕ್ಷದಲ್ಲಿ ಅಸಮಾಧಾನದ ಹೊಗೆಯಾಡಲು ಕಾರಣವಾಗಿದೆ. ಸವದಿ ಮತ್ತು ಪಾಟೀಲ್ ಗೆ ಮಂತ್ರಿಗಿರಿ ಭಾಗ್ಯ ಸಿಕ್ಕಿದ್ದು ಕ್ಲೀನ್ ಇಮೇಜ್ ಇದ್ದವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಬಗ್ಗೆ ಬಿಜೆಪಿ ಹೈಕಮಾಂಡ್ ಪ್ಲಾನ್ ಮಾಡಿದೆ ಎಂಬಂಶ ಹುಸಿ ಆಗಿಸಿದೆ ಎನ್ನಲಾಗುತ್ತಿದೆ.