ಪ್ರಮುಖ ಸುದ್ದಿ
ತಿಲಕ ಭಯ : ಚರ್ಚೆಗೆ ಗ್ರಾಸವಾಗಿದೆ ಮಾಜಿ ಸಿಎಂ ಸಿದ್ಧರಾಮಯ್ಯ ನಡೆ!
ಬಾಗಲಕೋಟೆ : ತಿಲಕ ಕಂಡರೆ ಭಯ ಆಗುತ್ತದೆ ಎಂದು ಹೇಳಿದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇಂದು ಬಾದಾಮಿ ಪಟ್ಟಣದಲ್ಲಿ ರಕ್ಷಾ ಬಂಧನ ವೇಳೆ ತಿಲಕವಿಡಲು ಮುಂದಾದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸಹೋದರಿಗೆ ಸಿದ್ಧರಾಮಯ್ಯ ತಿಲಕವಿಡದಂತೆ ಸೂಚಿಸಿದ್ದಾರೆ. ಆ ಮೂಲಕ ಸಿದ್ಧರಾಮಯ್ಯ ಅವರ ನಡೆ ಬಗ್ಗೆ ಮತ್ತೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಮಹಿಳೆ ರಾಖಿ ಕಟ್ಟಿ ತಿಲಕವಿಡಲು ಮುಂದಾದಾಗ ಸಿದ್ಧರಾಮಯ್ಯ ಅವರು ತಡೆದಿರುವ ಫೋಟೋ, ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.