ಪ್ರಮುಖ ಸುದ್ದಿ
ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾವಿಗೆ ಶರಣಾದ ತಾಯಿ-ಮಗಳು!
ಮೈಸೂರು : ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಸಮೀಪದ ಕಪಿಲಾ ನದಿಯಲ್ಲಿ ತಾಯಿ ಮತ್ತು ಮಗಳ ಶವ ಪತ್ತೆ ಆಗಿದ್ದು ಮೃತರು ಬಂಡಿಪಾಳ್ಯ ಗ್ರಾಮದ ಮಂಜುಳಾ (40) ಪುತ್ರಿ ಸೌಮ್ಯ(20) ಎಂದು ಗುರುತಿಸಲಾಗಿದೆ. ದೇಗುಲಕ್ಕೆ ಹೋಗುತ್ತಿರುವುದಾಗಿ ಹೇಳಿ ಹೋಗಿದ್ದ ತಾಯಿ ಮತ್ತು ಮಗಳು ಕಪಿಲಾ ನದಿ ಬಳಿ ಕೊನೆಯದಾಗಿ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹುಲ್ಲಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪೊಲೀಸರ ತನಿಖೆಯಿಂದಷ್ಟೇ ಪ್ರಕರಣದ ನಿಜಾಂಶವೇನು, ಆತ್ಮಹತ್ಯೆಗೆ ಕಾರಣವೇನೆಂಬುದು ಬಯಲಾಗಬೇಕಿದೆ.