ಪ್ರಮುಖ ಸುದ್ದಿ
ಯುದ್ಧದಾಹ : ಅಕ್ಟೋಬರ್ ನಲ್ಲಿ ಯುದ್ಧ ಮಾಡುತ್ತಂತೆ ‘ಪಾಪಿಸ್ತಾನ’!
ನವದೆಹಲಿ : ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವೆ ಬರುವ ಅಕ್ಟೋಬರ್ ನಲ್ಲಿ ಮಹಾ ಯುದ್ಧ ನಡೆಯಲಿದೆ ಎಂದು ಪಾಕಿಸ್ತಾನದ ರೈಲ್ವೇ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ ಎಂದು ಪಾಕಿಸ್ತಾನದ ಕೆಲ ಮಾಧ್ಯಮಗಳು ವರದಿ ಮಾಡಿವೆ. ಭಾರತ – ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದ್ದು ಸದ್ಯದ ಸ್ಥಿತಿ ನೋಡಿದರೆ ಇನ್ನೆರಡು ತಿಂಗಳಲ್ಲಿ ನೇರ ಯುದ್ಧ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಶೇಖ್ ರಶೀದ್ ಅಹ್ಮದ್ ಭವಿಷ್ಯ ನುಡಿದ್ದಾರೆ ಎಂದು ತಿಳಿದು ಬಂದಿದೆ.
ಎರಡು ದಿನಗಳ ಹಿಂದಷ್ಟೇ ಪಾಕಿಸ್ತಾನದ ಅದ್ಯಕ್ಷ ಇಮ್ರಾನ್ ಖಾನ್ ಅಣ್ವಸ್ತ್ರ ಬಳಕೆ ಬಗ್ಗೆ ಮಾತನಾಡಿದ್ದರು. ಎರಡೂ ದೇಶಗಳಲ್ಲಿ ಅಣ್ವಸ್ತ್ರಗಳಿದ್ದು ಅಣ್ವಸ್ತ್ರ ಬಳಕೆಯಿಂದಾಗಿ ಎರಡು ದೇಶಗಳು ಮಾತ್ರವಲ್ಲದೆ ಇಡೀ ವಿಶ್ವದ ಮೇಲೆ ಪರಿಣಾಮ ಬೀರಲಿದೆ ಎಂದು ಅಬ್ಬರಿಸಿದ್ದರು. ಪಾಕಿಸ್ತಾನದ ಯುದ್ಧದಾಹಕ್ಕೆ ವಿಶ್ವಸಮುದಾಯ ಒಂದಾಗಿ ಜೀವಪರವಾಗಿ ನಿಲ್ಲುವ ಮೂಲಕ ತಕ್ಕ ಪಾಠ ಕಲಿಸಬೇಕಿದೆ.