ಪ್ರಮುಖ ಸುದ್ದಿ
ಕೊಡಗಿನಲ್ಲಿ ಹುಚ್ಚ ವೆಂಕಟ್ ಗೆ ಬಿತ್ತು ಗೂಸಾ!
ಕೊಡಗು : ಹುಚ್ಚಾಟ ಮೂಲಕವೇ ಪ್ರಚಾರ ಗಿಟ್ಟಿಸಿಕೊಂಡಿರುವ ಹುಚ್ಚ ವೆಂಕಟ್ ಇತ್ತೀಚೆಗೆ ಚನ್ನೈ ನಲ್ಲಿ ರಿಯಲ್ ಹುಚ್ಚನಾಗಿ ಬೀದಿಬೀದಿ ಅಲೆಯುತ್ತಿದ್ದಾನೆಂಬುದು ವರದಿ ಆಗಿತ್ತು. ಆದರೆ, ಇಂದು ಕೊಡಗು ಪಟ್ಟಣದ ಬಸ್ ನಿಲ್ದಾಣದ ಸಮೀಪ ಪ್ರತ್ಯಕ್ಷವಾದ ಹುಚ್ಚ ವೆಂಕಟ್ ಏಕಾಏಕಿ ಕಾರಿನ ಮೇಲೆ ದಾಳಿ ನಡೆಸಿದ್ದಾನೆ. ಏಕೆ ಗುರಾಯಿಸ್ತೀಯಾ, ನಾನು ಯಾರು ಗೊತ್ತಾ ಎಂದು ದಿಲೀಪ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ. ಕಾರಿನ ಮೇಲೆ ಕಾಲಿಟ್ಟು ಫೋಸ್ ಕೊಟ್ಟಿದ್ದಲ್ಲದೆ ಕಾರಿನ ಗಾಜು ಹೊಡೆದು ಹಾಕಿದ್ದಾನೆ. ಪರಿಣಾ ರೊಚ್ಚಿಗೆದ್ದ ಸ್ಥಳೀಯರು ವೆಂಕಟ್ ಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.