ಪುರಾತನ ಹನುಮನ ಕ್ಷೇತ್ರದ ದರ್ಶನ ಪಡೆದ ದರ್ಶನಾಪುರ
ಬಯಲು ಹನುಮನ ದರ್ಶನ ಪಡೆದ ದರ್ಶನಾಪುರ
ಯಾದಗಿರಿ, ಶಹಾಪುರಃ ನಗರದ ನಾಗರಕೆರೆ ಪಕ್ಕದ ಬೆಟ್ಟದ ಮೇಲಿರುವ ಪುರಾತನ ಬಯಲು ಹನುಮಾನ ಕ್ಷೇತ್ರಕ್ಕೆ ಶನಿವಾರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಭೇಟಿ ನೀಡಿ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಬಯಲು ಹನುಮಾನ ಕ್ಷೇತ್ರ ಐತಿಹಾಸಿಕ ಹಿನ್ನೆಲೆ ಕುರಿಉ ಮಾಹಿತಿ ಪಡೆದರು. ಕ್ಷೇತ್ರದ ಇತಿಹಾಸ ಬಗ್ಗೆ ಸಂಶೋಧಕರು ಮತ್ತು ಅರ್ಚಕರು ಹಿರಿಯರಿಂದ ಮಾಹಿತಿ ಪಡೆದರು ಆಶ್ಚರ್ಯ ವ್ಯಕ್ತಪಡಿಸಿದರು ಎಂದು ಬಯಲು ಬಲಭೀಮೇಶ್ವರ ಭಕ್ತ ಮಂಡಳಿಯ ರಾಮು ತಹಸೀಲ್ ತಿಳಿಸಿದರು.
ಅಲ್ಲದೆ ಮುಂದಿನ ಶನಿವಾರ ಶ್ರೀದೇವರ ದರ್ಶನಕ್ಕೆ ಶಾಸಕರು ಮತ್ತೊಮ್ಮೆ ಬರುವೆ ಎಂದು ತಿಳಿಸಿದ್ದಾರೆ ಎಂದು ಶ್ರೀಕ್ಷೇತ್ರದ ಭಕ್ತ ಮಂಡಳಿ ತಿಳಿಸಿದ್ದಾರೆ. ಇಷ್ಟೊಂದು ಭಕ್ತಿ ಶ್ರದ್ಧೆಯಿಂದ ಹನುಮನ ಕ್ಷೇತ್ರವನ್ನು ಶುಚಿತ್ವ ಉತ್ತಮ ವಾತಾವರಣ ನಿರ್ಮಾಣ ಮಾಡಿದ ಯುವಕರ ಬಗ್ಗೆ ಶಾಸಕರು ಉತ್ತಮ ಬೆಳವಣಿಗೆ ಎಂದು ತಿಳಿಸಿದ್ದಾರೆ.
ಯುವ ಸಮೂಹವೇ ಹನುಮನ ದರ್ಶನ, ಪೂಜೆ ಪುನಸ್ಕಾರದಲ್ಲಿ ಶ್ರದ್ಧಾ ಭಕ್ತಿಯಿಂದ ತೊಡಗಿಸಿಕೊಂಡಿರುವದು ಸಂತಸ ತಂದಿದೆ. ಹೀಗಾಗಿ ಶನಿವಾರ ಮತ್ತೊಮ್ಮೆ ಶ್ರೀಕ್ಷೇತ್ರಕ್ಕೆ ಆಗಮಿಸಿ ದರ್ಶನ ಪಡೆಯುವೆ. ಕ್ಷೇತ್ರದ ಅಭಿವೃದ್ಧಿಗೆ ಭಕ್ತರ ಮನವಿಯಂತೆ ಸ್ಪಂಧಿಸುವೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ವಸಂತಕುಮಾರ ಸುರಪುರಕರ್, ಅಬ್ದುಲ್ ಹಳಕಟ್ಟಿ, ಶಿವಕುಮಾರ ಬಿಲ್ವಂಕೊಂಡಿ, ಕಾಶಿನಾಥ ದಿಗ್ಗಿ, ಭೀಮು ಬಿಲ್ಲವ್, ಅಯ್ಯಣ್ಣ ನಾಶಿ, ಸಿದ್ದು ಹಯ್ಯಾಳಕರ್ ಸೇರಿದಂತೆ ಇತರರಿದ್ದರು.