ಸಂಭ್ರಮದ ಐದನೇ ದಿನ ಗಣೇಶ ವಿಸರ್ಜನೆ
ಶಹಾಪುರದಲ್ಲಿ 5 ನೇ ದಿನ ಗಣೇಶ ವಿಸರ್ಜನೆ
ಯಾದಗಿರಿ, ಶಹಾಪುರಃ ನಗರದಲ್ಲಿ ಖಾಸ್ಗತೇಶ್ವರ ಮತ್ತು ಸಂಗಮೇಶ್ವರ ವಸತಿ ಸಹಿತ ಶಾಲೆಯಲ್ಲಿ ಗಣೇಶೋತ್ಸವ ಅಂಗವಾಗಿ ವಿದ್ಯಾರ್ಥಿಗಳು ಸ್ಥಾಪಿಸಿದ ಗಣೇಶನನ್ನು ಐದನೇಯ ದಿನವಾದ ಗುರುವಾರ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದವು ವಿಜೃಂಬಣೆಯಿಂದ ನಗರದ ನಾಗರ ಕೆರೆಯಲ್ಲಿ ಗಣೇಶನನ್ನು ಪೂಜಾ ವಿಧಿವಿಧಾನ ಮೂಲಕ ವಿಸರ್ಜನೆ ಮಾಡಿದರು.
ಮುಂಚಿತವಾಗಿ ನಗರದ ಪ್ರಮುಖ ಬೀದಿಗಳ ಮೂಲಕ ಗಣೇಶನನ್ನು ಮೆರವಣಿಗೆ ಮೂಲಕ ಡೊಳ್ಳು, ಕೋಲು ಕುಣಿತದ ಮೂಲಕ ಭಜನೆ ಹಾಡು ಮತ್ತು ಡಿಜೆ ಮೂಲಕ ಮಕ್ಕಳು ನೃತ್ಯದೊಂದಿಗೆ ಹಾಡು ಕುಣಿತ ಸಂಭ್ರದೊಂದಿಗೆ ಗಣೇಶ ವಿಸರ್ಜನೆ ಕಾರ್ಯ ನಡೆದಿರುವದು ಕಂಡು ಬಂದಿತು.
ನಗರದ ಶರಣಬಸವೇಶ್ವರ ನಗರ ಗಣೇಶ ಮಂಡಳಿ ಮತ್ತು ಜೀವೇಶ್ವರ ಬಡಾವಣೆಯಲ್ಲಿ ಸ್ಥಾಪಿಸಿದ ಗಣೇಶ ಸೇರಿದಂತೆ ವಿವಿಧಡೆಯ ಬಡಾವಣೆಗಳಲ್ಲಿ ಸ್ಥಾಪಿಸಲಾದ ಗಣೇಶನನ್ನು ಐದನೇಯ ದಿನಕ್ಕೆ ವಿಸರ್ಜನೆ ನಡೆಸಲಾಯಿತು.
ಮೆರವಣಿಗೆಯಲ್ಲಿ ರಂಗು ರಂಗಿನ ಸಿಡಿಮದ್ದುಗಳ ಆರ್ಭಟವು ಕಂಗೊಳಿಸಿತು. ನಾಗರ ಕೆರೆಯಲ್ಲಿ ಗಣೇಶ ವಿಸರ್ಜನೆಗೆ ಸೂಕ್ತ ಅವಕಾಶ ಕಲ್ಪಿಸಲಾಗಿತ್ತು. ಯುವಕರು, ಶಾಲಾ ವಿದ್ಯಾರ್ಥಿಗಳು ಗಣೇಶೋತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಂಡಿರುವದು ಕಂಡು ಬಂದಿರು. ಸೂಕ್ತ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.