ಪ್ರಮುಖ ಸುದ್ದಿ
ಕೌಡಿಪೀರಗಳು ಕುಳಿತಿವೆ ಈಗಲೂ ಮೋಹರಂ ಹೆಜ್ಜೆ ಹಾಕುವ
ಮೋಹರಂ ಇನ್ನೂ ಮುಗಿದಿಲ್ಲಾರ್ರಿ ಕೌಡಿಪೀರಗಳ ಕೂತಿವೆ
ಶಹಾಪುರಃ ಮೋಹರಂ ಕೊನೆಯ ದಿನ ದೊಡ್ಡ ಪೀರಗಳ ಮೆರವಣಿಗೆ, ನಿತ್ಯ ಧೂಪ, ಸಕ್ಕರೆ ನೈವೇದ್ಯ ಕೊಟ್ಟು ಪ್ರಾರ್ಥನೆ ಸಲ್ಲಿಸಿದ್ದಾಯ್ತು.
ಅಲ್ಲದೆ ಮೋಹರಂ ಹಬ್ಬದ ಪ್ರಕಾರ ಹತ್ತನೇಯ ತಾರೀಖು ಪೀರಗಳ ದಫನ್ ಕಾರ್ಯ ಅಚ್ವುಕಟ್ಟಾಗಿ ಜರುಗಿತು.
ಇವಾಗ್ ಸಣ್ಣ ಪೀರಗಳ ಸ್ಥಾಪನೆಯಾಗಿದೆ. ಅವುಗಳನ್ನು ಸಾಂಪ್ರದಾಯಿಕವಾಗ ಪದ್ಧತಿಯಂತೆ ಆಚರಣೆ ನಡೆಯುತ್ತಿದೆ. ಮೋಹರಂ ಹಬ್ಬ ಮುಗೀತು ಈ ಬಾರಿ ಹೆಜ್ಜೆ ಹಾಕಲಿಲ್ಲ ಕೆಲಸದ ಮೇಲೆ ಬೇರಡೆ ಹೋಗಿದ್ದೆ ಕೆಲಸವಿತ್ತು ಎಂದು ಗೊಣಗುತ್ತಿರುವವರು ಈಗಲೂ ಅದೇ ಹಲಗೆ ನಾದಕ್ಕೆ ಹೆಜ್ಜೆ ಹಾಕಬಹುದು ಕೌಡಿ ಪೀರಗಳ ಮುಂದೇ ನೆನಪಿರಲಿ.