ಪ್ರಮುಖ ಸುದ್ದಿ
ವಾಹನ ಸವಾರರಿಗೆ ಖುಷಿ ಸುದ್ದಿ, ದಂಡ ಕಡಿಮೆಗೊಳಿಸಿ ಅಧಿಕೃತ ಘೋಷಣೆ ಸಾಧ್ಯತೆ
ಇಂದೇ ದಂಡ ಕಡಿಮೆಗೊಳಿಸಿ ಅಧಿಕೃತ ಘೋಷಣೆ ಸಾಧ್ಯತೆ
ಬೆಂಗಳೂರಃ ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘನೆಗಾಗಿ ಕಟ್ಟಬೇಕಾಗಿದ್ದ ದುಬಾರಿ ದಂಡಕ್ಕೆ ಬೆಚ್ಚಿಬಿದ್ದಿದ್ದರು ಅಲ್ಲದೆ ಸವಾರರಿಂದ ತೀವ್ರ ಆಕ್ರೋಶವು ವ್ಯಕ್ತವಾಗಿತ್ತು.
ಇದೀಗ ರಾಜ್ಯ ಸರ್ಕಾರ ಗುಜರಾತ ಮಾದರಿಯಲ್ಲಿ ದಂಡ ಕಡಿಮೆ ಮಾಡಲು ಸೂಕ್ತ ಕ್ರಮಕೈಗೊಂಡಿದ್ದು, ಇಂದಿನಿಂದಲೇ ದಂಡದ ಮೊತ್ತ ಪರಿಷ್ಕರಿಸಿ ಆದೇಶ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಡಿಸಿಎಂ ಲಕ್ಷ್ಮಣ ಸವದಿ, ಗುಜರಾತ್ ಪರಿಷ್ಕೃತ ಆದೇಶ ಪಟ್ಟಿ ನಮ್ಮ ಕೈ ಸೇರಿದೆ. ಸಿಎಂ
ಯಡಿಯೂರಪ್ಪನವರ ಜೊತೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುತ್ತಿದೆ ಎನ್ನಲಾಗಿದೆ. ಇಂದೇ ಅಧಿಕೃತ ಪ್ರಕಟಣೆ ಸಾಧ್ಯತೆ ಇದೆ ಎನ್ನಲಾಗಿದೆ.